Wednesday, November 26, 2025

‘ಭಾರತ ರತ್ನ’ಕ್ಕೆ ಕುವೆಂಪು ಹೆಸರು ಶಿಫಾರಸು: ಇಲ್ಲಿದೆ ಸಚಿವ ಸಂಪುಟ ಸಭೆ ಪ್ರಮುಖ ಹೈಲೈಟ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸಂಪುಟ ಸಭೆಯಲ್ಲಿ ಕುವೆಂಪು ಅವರಿಗೆ ಭಾರತ ರತ್ನ‌ಪ್ರಶಸ್ತಿ ನೀಡುವಂತೆ ಕೇಂದ್ರಕ್ಕೆ ಶಿಫಾರಸು‌ಮಾಡಲು ನಿರ್ಧರಿಸಲಾಗಿದೆ.

ಈ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಸಂಪುಟದ ನಿರ್ಧಾರಗಳನ್ನು ವಿವರಿಸಿದಂತ ಸಚಿವ ಹೆಚ್.ಕೆ ಪಾಟೀಲ್ ಅವರು, ಇಂದು 40 ವಿಷಯಗಳ ಬಗ್ಗೆ ಚರ್ಚೆಯಾಗಿದೆ. ಉಪಖನಿಜ ರಿಯಾಯ್ತಿ ತಿದ್ದುಪಡಿ ನಿಯಮಕ್ಕೆ ಒಪ್ಪಿಗೆ ನೀಡಲಾಗಿದೆ. ಜನರಿಗೆ ಅನುಕೂಲವಾಗುವಂತೆ ಸರಳೀಕರಣ ಮಾಡಲಾಗುತ್ತಿದೆ. ಮಣ್ಣು,ಮರಳು ತೆಗೆಯಲು ಅನುಕೂಲ ಆಗಲಿದೆ ಎಂದರು.

ಪ್ರೋಟೋಕಾಲ್ ಮಾರ್ಗಸೂಚಿ‌ ಪರಿಷ್ಕರಣೆ ಮಾಡಲಾಗುತ್ತಿದೆ. ಸರ್ಕಾರಿ ಕಾರ್ಯಕ್ರಮಗಳಿಗೆ ಅನ್ವಯವಾಗಲಿದೆ. ಆಹ್ವಾನ ಪತ್ರಿಕೆಗಳಲ್ಲಿ‌ ಗಣ್ಯರ ಹೆಸರು ಸೇರಿಸಲು ಅವಕಾಶ ನೀಡಲಾಗುತ್ತದೆ. ಶಿಷ್ಟಾಚಾರ ಪಟ್ಟಿ ಬದಲಾವಣೆಗೆ ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ. 9 ಗಣ್ಯರಿಗಷ್ಟೇ ಇನ್ಮುಂದೆ ಆಹ್ವಾನಿಸಲು ಸಮ್ಮತಿ ನೀಡಲಾಗಿದೆ. ಈ ಮೊದಲು 20, 25 ಗಣ್ಯರಿಗೆ ಅವಕಾಶ ಇರ್ತಿತ್ತು. ಯಾರು ಎಷ್ಟೇ ದೊಡ್ಡವರಿರಲಿ ಅವಕಾಶ ಇಲ್ಲ. ಅಮಂತ್ರಣ ಇರುವವರಿಗಷ್ಟೇ ವೇದಿಕೆಗೆ ಅವಕಾಶ ನೀಡಲಾಗಿದೆ ಎಂದರು.

ಕುಸುಮ್ ಯೋಜನೆಗೆ ಸರ್ಕಾರದ ಸಹಾಯಧನ
ಕುಸುಮ್ ಯೋಜನೆಗೆ ಸರ್ಕಾರದ ಸಹಾಯಧನ ಶೇ 50 ರಷ್ಟು ಸಹಾಯ ಧನ ನೀಡಲು ಸಮ್ಮತಿ ನೀಡಲಾಗಿದೆ.

ಬಯೋ ಡೀಸೇಲ್ ಮಿಶ್ರಣ ನಿಯಮಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಬಯೋಡಿಸೇಲ್ ಹೆಸರಿನಲ್ಲಿ ಇತರ ರಾಸಾಯನಿಕ ಮಾರಾಟ. ಡಿಸೇಲ್ ಗೆ 10% ಮಿಕ್ಸ್ ಮಾಡಲು ಅವಕಾಶವಿದೆ. ಮೊದಲಿಗೆ 7% ಮಿಕ್ಸ್ ಗೆ ಅವಕಾಶ ಇತ್ತು. ಎಷ್ಟೆಷ್ಟು ಪ್ರಮಾಣದಲ್ಲಿ ಮಾಡಬಹುದು. ಬಯೋ ಎನರ್ಜಿ ಡೆವಲಪ್ ಮೆಂಟ್ ಬೋರ್ಡ್ ಗೆ ನೀಡಲಾಗಿದೆ ಎಂದರು.”

ಆಸ್ಪತ್ರೆಗಳ ನವೀಕರಣ
ಕೊರಟಗೆರೆ, ಜಗಳೂರು, ಮಾಗಡಿ, ಕುಶಾಲನಗರ, ಸವಣೂರು, ಮಾಲೂರು, ರಾಮದುರ್ಗ ಆಸ್ಪತ್ರೆಗಳ ನವೀಕರಣ ಮಾಡಲಾಗುತ್ತಿದೆ. ವೆನ್ಲಾಕ್, ದಾವಣಗೆರೆ ಜಿಲ್ಲಾ ಸ್ಪತ್ರೆಗಳ ನವೀಕರಣ. 540 ಕೋಟಿಗಳ ಅಂದಾಜು ಮೊತ್ತಕ್ಕೆ ಸಂಪುಟ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.

ಲೇಬರ್ ಸೆಸ್ ತಂತ್ರಾಶ ಪ್ರಾರಂಭಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಟ್ರಾಕಿಂಗ್ ಆಂಡ್ ಮಾನಿಟರಿಂಗ್ ಸಾಫ್ಟ್ ವೇರ್. 28.11 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೆ ಸಮ್ಮತಿಸಲಾಗಿದೆ. ಔಟ್ ಸೋರ್ಸ್ ಎಂಪ್ಲಾಯ್ ಗಳ ನೇಮಕ ದ ಬಗ್ಗೆ ಹೊಣೆ ನೀಡಲಾಗುತ್ತಿದೆ.

ವಿಕ್ಟೋರಿಯಾ ಆಸ್ಪತ್ರೆ ಪೀಠೋಪಕರಣ ಖರೀದಿಗೆ ಒಪ್ಪಿಗೆ ನೀಡಲಾಗಿದೆ.

ಅಲ್ಪಸಂಖ್ಯಾತರ ಕಲ್ಯಾಣ ಹಜ್ ಇಲಾಖೆ, ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗೆ ಸಮ್ಮತಿಸಲಾಗಿದೆ. 398 ಕೋಟಿ ಅನುದಾನಕ್ಕೆ ಒಪ್ಪಿಗೆ ನೀಡಲಾಗಿದೆ. ರಾಜ್ಯದ 22 ಕ್ಷೇತ್ರಗಳ 40 ಕಾಮಗಾರಿಗೆ ಒಪ್ಪಿಗೆ ನೀಡಲಾಗಿದೆ ಎಂದರು.

ಪಿರಿಯಾಪಟ್ಟಣದ ಬೆಟ್ಡದ ಪುರ ರಸ್ತೆ ಅಭಿವೃದ್ಧಿ
ಪಿರಿಯಾಪಟ್ಟಣದ ಬೆಟ್ಡದ ಪುರ ರಸ್ತೆ ಅಭಿವೃದ್ಧಿ. ಸೀಮಾ ಮಸೂತಿ ಬಿಡಿಎಯಿಂದ ಜಿ ಕೆಟಗರಿ ನಿವೇಶನ. ಶುದ್ಧಕ್ರಯ ಪತ್ರ ನೀಡಲು ಒಪ್ಪಿಗೆ ನೀಡಲಾಗಿದೆ. ಏರ್ ಇಂಡಿಯಾ ಘನತ್ಯಾಜ್ಯ ವಿಲೇವಾರಿಗೆ ಒಪ್ಪಿಗೆ ಸೂಚಿಸಲಾಗಿದೆ. ಬೈರಮಂಗಲ ಕೆರೆ ದಡದಲ್ಲಿ ತ್ಯಾಜ್ಯ ಶುದ್ಧೀಕರಣ ಘಟಕ ನಿರ್ಮಾಣವನ್ನು ಮಾಡಲಾಗುತ್ತಿದೆ. 25 ದಶಲಕ್ಷ ಲೀಟರ್ ಸಾಮರ್ಥ್ಯದ ಘಟಕ ನಿರ್ಮಾಣ. 391 ಕೋಟಿ ಮೊತ್ತದ ಯೋಜನೆಗೆ ಅನುಮೋದನೆ ನೀಡಲಾಗಿದೆ. 7 ವರ್ಷಗಳ ಅವಧಿಗೆ ಖಾಸಗಿಯವರಿಗೆ ನೀಡಲಾಗುತ್ತದೆ ಎಂದರು.

ಸಿಡಿಎಸ್ ನಾಲೆಗಳ ಅಧುನೀರಕಣ
ಸಿಡಿಎಸ್ ನಾಲೆಗಳ ಅಧುನೀರಕಣಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಶ್ರೀರಂಗಪಟ್ಟಣದಬಳಿ ಬರುವ ನಾಲೆಗಳು, ಪಿಕ್ ಅಪ್ ನಾಲೆಗಳ ನಿರ್ಮಾಣ,ಅಭಿವೃದ್ದಿ. ಸುಮಾರು 50 ಕೋಟಿ ಅಂದಾಜು ಮೊತ್ತಕ್ಕೆ ಸಹಿ ಹಾಕಲಾಗಿದೆ. ಕೆಜೆಐಎಸ್-2 ಅನುಷ್ಠಾನಕ್ಕೆ ಒಪ್ಪಿಗೆ ಸಾಧ್ಯತೆ ಇದೆ. ಕರ್ನಾಟಕ ಬೌಗೋಳಿಕ‌ಮಾಹಿತಿ ವ್ಯವಸ್ಥೆ. 150 ಕೋಟಿ ಅಂದಾಜು‌ಮೊತ್ತಕ್ಕೆ ಸಮ್ಮತಿಸಲಾಗಿದೆ. 70 ವರ್ಷ ಮೇಲ್ಪಟ್ಟವರಿಗೆ ಆರೋಗ್ಯ ಸೇವೆ, ಆಯುಷ್ಮಾನ್ ಭಾರತ್ ಯೋಜನೆಯಡಿ ಸೇವೆ, ಇಎಸ್ ಐಎಸ್ ಲಾಭ ಪಡೆಯಲು ಸರ್ಕಾರದ ಅವಕಾಶ. ಯಲಹಂಕ,ಹೆಬ್ಬಾಳದಲ್ಲಿ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣ. ಬೆಳ್ಳಹಳ್ಳಿ,ಜಿಕೆವಿಕೆಯಲ್ಲಿ ಆಸ್ಪತ್ರೆಗಳ ನಿರ್ಮಾಣ. ಸುಮಾರು 10೦ ಕೋಟಿ ವೆಚ್ಚಕ್ಕೆ ಒಪ್ಪಿಗೆ ನೀಡಲಾಗಿದೆ ಎಂದರು.

19.25 ಕೋಟಿ ವೆಚ್ಚದಲ್ಲಿ ಕಂದಾಯ ನಿರೀಕ್ಷಕರಿಗೆ ಕ್ರೋಮ್ ಬುಕ್ ವಿತರಣೆ ಮಾಡಲಾಗುತ್ತಿದೆ. ಸುಮಾರು 3500 ಕ್ರೋಮ್ ಬುಕ್ ಖರೀದಿಸಲಾಗುತ್ತಿದೆ.

ಸಿಎಂ ಆದಿವಾಸಿ ಗೃಹ ಭಾಗ್ಯ ಯೋಜನೆ ಜಾರಿ. ಅರಣ್ಯ ವಾಸಿಗಳಿಗೆ ಮನೆಗಳ ನಿರ್ಮಾಣ. ಸೋಲಿಗ, ಹಲಸರು, ಗೌಡಲು, ಸಿದ್ದಿ,ಮಲೆ ಕುಡಿಯ, ಕಾಡುಕುರುವ, ಇರುಳಿಗ, ಜೇನು ಕುರಬರಿಗೆ ಮನೆ ನಿರ್ಮಾಣ. 160 ಕೋಟಿ ವೆಚ್ಚದ ಯೋಜನೆಗೆ ಒಪ್ಪಿಗೆ. ಗಂಗಾ ಕಲ್ಯಾಣ ಯೋಜನೆ ಗುತ್ತಿಗೆ ವಿಸ್ತರಣೆ. ಬೋರ್ ವೆಲ್ ಕೊರೆಯುವುದು,ಪಂಪ್ ಹಾಕುವ ಗುತ್ತಿಗೆ. ಗುತ್ತಿಗೆ ನೀಡಿರುವವರಿಗೆ ಎರಡು ವರ್ಷ ವಿಸ್ತರಣೆ ಮಾಡಲಾಗುತ್ತಿದೆ. ಒಂದು ವೇಳೆ ಗುತ್ತಿಗೆದಾರರು ಒಪ್ಪದಿದ್ದರೆ ಡಿಸಿಗಳಿಗೆ ಹೊಣೆ ನೀಡಲಾಗುತ್ತಿದೆ ಎಂದರು.

ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಭೂಮಿ
293 ಕೋಟಿ ವೆಚ್ಚದಲ್ಲಿ ಮದ್ದೂರು,ಮಳವಳ್ಳಿ ವಿಸಿ ಶಾಕಾ ನಾಲೆಗಳ ಅಧುನೀಕರಣ ಮಾಡಲಾಗುತ್ತಿದೆ. ಮಲಪ್ರಭಾ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ. ಜೊತೆಗೆ ತಡೆಗೋಡೆಯ ನಿರ್ಮಾಣಕ್ಕೆ ಒಪ್ಪಿಗೆ. ಖಾನಾಪುರ ತಾಲೂಕಿನ ಚಿಕ್ಕಹಟ್ಟಿಹೊಳೆ ಬಳಿ ನಿರ್ಮಾಣ. 50 ಕೋಟಿ ಅಂದಾಜು‌ ಮೊತ್ತಕ್ಕೆ ಒಪ್ಪಿಗೆ ನೀಡಲಾಗಿದೆ. ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಭೂಮಿ ನೀಡಿಕೆಗೆ ಸಮ್ಮತಿಸಲಾಗಿದೆ ಎಂದರು.

ಅಪ್ಪರ್ ಕೃಷ್ಣಾ ಯೋಜನೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ದಿವಂಗತ ನಟ ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುತ್ತಿದೆ. ಬಿ.ಸರೋಜಾದೇವಿಗೂ ಕರ್ನಾಟಕ‌ರತ್ನ ಪ್ರಶಸ್ತಿ ನೀಡಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ.

error: Content is protected !!