Friday, December 12, 2025

ಲಕ್ಷ್ಮೀ ಹೆಬ್ಬಾಳ್ಕರ್‌ ಸದನದ ಗೌರವ ಕಳ್ದಿದಾರೆ, ಇವರಿಗೆ ಏನು ಶಿಕ್ಷೆ ಕೊಡ್ತೀರಿ? ಅಶೋಕ್‌ ಕಿಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಧಾನಸಭೆಯಲ್ಲಿಂದು ಎರಡು ತಿಂಗಳ ಗೃಹಲಕ್ಷ್ಮಿ ಕಂತು ಬಾಕಿ ವಿಚಾರ ಮುನ್ನೆಲೆಗೆ ಬಂದಿತ್ತು. ಈ ವರ್ಷದ ಫೆಬ್ರವರಿ, ಮಾರ್ಚ್ ತಿಂಗಳ ಗೃಹಲಕ್ಷ್ಮಿ ಕಂತು ಬಂದಿಲ್ಲ ಅಂತ ಮೊನ್ನೆ ಸದನದಲ್ಲಿ ಶಾಸಕ‌ ಮಹೇಶ್ ಟೆಂಗಿನಕಾಯಿ ಕೇಳಿದ್ರು. ಅದಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉತ್ತರ ಕೊಟ್ಟು, ಆಗಸ್ಟ್‌ವರೆಗೂ ಕ್ಲಿಯರ್ ಆಗಿದೆ. ಆಗಸ್ಟ್‌ವರೆಗೆ ಅಂದ್ರೆ ಫೆಬ್ರವರಿ, ಮಾರ್ಚೂ ಸೇರುತ್ತೆ, ಅರ್ಥ ಮಾಡ್ಕೊಳ್ಳಿ ಅಂದಿದ್ರು.

ಈ ಉತ್ತರ ಬಿಜೆಪಿ ನಾಯಕರಿಗೆ ಸಮಾಧಾನ ತಂದಿರಲಿಲ್ಲ. ಇವತ್ತು ಮತ್ತೆ ಸದನದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ವಿಚಾರ ಪ್ರಸ್ತಾಪಿಸಿ, ಲಕ್ಷ್ಮಿ ಹೆಬ್ಬಾಳ್ಕರ್ ಸದನಕ್ಕೆ ಸುಳ್ಳು ಹೇಳಿದ್ದಾರೆ. ಫೆಬ್ರವರಿ, ಮಾರ್ಚ್ ಕಂತು ಬಂದಿದೆ ಅಂತ ಸಚಿವರು ಉತ್ತರ ಕೊಟ್ಟಿದ್ದಾರೆ. ಆದ್ರೆ ಆ ಎರಡು ಕೊಟ್ಟೇ ಇಲ್ಲ ಅಂತ ಮಹಿಳಾ/ಮಕ್ಕಳ ಕಲ್ಯಾಣ ಇಲಾಖೆಯ ಹಾವೇರಿ, ಗದಗ ಉಪನಿರ್ದೇಶಕರೇ ಅಧಿಕೃತವಾಗಿ ಮಾಹಿತಿ ಕೊಟ್ಟಿದ್ದಾರೆ ಎಂದು ಪತ್ರ ಪ್ರದರ್ಶಿಸಿದರು. ಸಚಿವರು ತಪ್ಪು ಉತ್ತರ ಕೊಟ್ಟಿದಾರೆ. ಸದನದ ಗೌರವ ಕಳೆದಿದ್ದಾರೆ. ಅವರ ವಿರುದ್ಧ ಹಕ್ಕುಚ್ಯುತಿಗೆ ಕೊಡ್ತೀರಾ? ಪನಿಶ್ಮೆಂಟ್ ಏನು ಅಂತ ವಾಗ್ದಾಳಿ ನಡೆಸಿದರು. 

error: Content is protected !!