Sunday, October 12, 2025

ಡಿಕೆಶಿ ಸುರಂಗದ ಹುಚ್ಚಿನಿಂದ ಲಾಲ್‌ಬಾಗ್‌ಗೆ ಸಮಸ್ಯೆ ಆಗತ್ತೆ: ಅಶೋಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸುರಂಗ ರಸ್ತೆ ಯೋಜನೆಯಿಂದ ನಗರದ ಐಕಾನಿಕ್ ಲಾಲ್‌ಬಾಗ್ ಸಸ್ಯೋದ್ಯಾನಕ್ಕೆ ಅಪಾಯ ಎದುರಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ ಆರೋಪಿಸಿದ್ದಾರೆ.

ಡಿಸಿಎಂ ಡಿ ಕೆ ಶಿವಕುಮಾರ್ ಅವರ ಸುರಂಗದ ಹುಚ್ಚಿನಿಂದ ಲಾಲ್‌ಬಾಗ್ ಅಪಾಯ’ದಲ್ಲಿದೆ ಎಂಬ ಶೀರ್ಷಿಕೆಯಡಿಯಲ್ಲಿ ಪೋಸ್ಟ್ ಮಾಡಿರುವ ಅಶೋಕ್, ಬೆಂಗಳೂರಿನ ಹೆಮ್ಮೆ, ಜೀವಂತ ಪರಂಪರೆಯಾಗಿರುವ ಲಾಲ್ ಬಾಗ್ ಸಸ್ಯೋಧ್ಯಾನಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಅಜಾಗರೂಕ ರೂ. 26,000 ಕೋಟಿ ವೆಚ್ಚದ ಸುರಂಗ ರಸ್ತೆ ಯೋಜನೆಯಿಂದ ಗಂಡಾಂತರ ಎದುರಾಗಿದೆ ಎಂದು ಬರೆದುಕೊಂಡಿದ್ದಾರೆ.

ಒಬ್ಬ ವ್ಯಕ್ತಿಯ ಪ್ರಚಾರ ಮತ್ತು ವ್ಯಾನಿಟಿ ಯೋಜನೆಗಾಗಿ ಲಾಲ್‌ಬಾಗ್‌ನ ಸುಮಾರು ಆರು ಎಕರೆ ಭೂಮಿ ಕಳೆದುಹೋಗುತ್ತದೆ. ಸಾವಿರಾರು ಮರಗಳನ್ನು ಕಡಿಯಲಾಗುತ್ತದೆ. ಪರಿಸರ ವ್ಯವಸ್ಥೆಯನ್ನು ಬದಲಾಯಿಸಲಾಗದಂತೆ ಹಾನಿಗೊಳಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ.

error: Content is protected !!