Thursday, September 4, 2025

ಧಾರ್ಮಿಕ ಕ್ಷೇತ್ರಗಳ ಅಪಪ್ರಚಾರ ತಡೆಯಲು ಕಾನೂನು? ಅಮಿತ್‌ ಶಾ ಹೇಳಿದ್ದೇನು?

ಹೊಸದಿಗಂತ ವರದಿ ಹುಬ್ಬಳ್ಳಿ:

ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಹಾಗೂ ಧಾರ್ಮಿಕ ಕ್ಷೇತ್ರಗಳ ಮೇಲಿನ ಅಪಪ್ರಚಾರ ತಡೆಗಟ್ಟಲು ಸೂಕ್ತ ಕಾನೂನು ಜಾರಿಗೆ ತರಬೇಕೆಂದು ಸಾಧು-ಸಂತರ ನಿಯೋಗ ದೆಹಲಿಗೆ ತೆರಳಿ ಗೃಹ ಸಚಿವ ಅಮಿತ್ ಶಾ ಅವರನ್ನು ಮನವಿ ಮಾಡಿದೆ. ಇದಕ್ಕೆ ಅಮಿತ್‌ ಶಾ ಸ್ಪಂದಿಸಿದ್ದು, ಮುಂದಿನ ದಿನಗಳಲ್ಲಿ ಕಾನೂನು‌ ಜಾರಿಗೆ ತರುವುದಾಗಿ ಭರವಸೆ ನೀಡಿದ್ದಾರೆ ಎಂದು ರಾಷ್ಟ್ರ ಸಂತ ಗುಣಧರನಂದಿ ಮಹರಾಜರು ತಿಳಿಸಿದರು.

ಇಲ್ಲಿಯ ಶ್ರೀ ಕ್ಷೇತ್ರ ವರೂರು ಗ್ರಾಮದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿ ಅಮಿತ್ ಶಾ ಅವರ ಭೇಟಿಗೆ ನಿಯೋಗ ಕಳುಹಿಸಿಕೊಡಲಾಗಿತ್ತು. ಸುಮಾರು ೪೮ ನಿಮಿಷ ಸಾಧು ಸಂತರು ಧರ್ಮಸ್ಥಳ ವಿರುದ್ಧ ನಡೆಸುತ್ತಿರುವ ಷಡ್ಯಂತ್ರ, ಅಪಪ್ರಚಾರ ಕುರಿತು ಅಮಿತ್ ಶಾ ಯೊಂದಿಗೆ ಚರ್ಚಿಸಿ ಮನವರಿಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಹೀಗಾಗದಂತೆ ಕ್ರಮವಹಿಸಲು ಹೊಸ ಕಾನೂನು ರೂಪಿಸಲು ಮನವಿ ಮಾಡಿದ್ದು, ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಯಾವುದೇ ಧರ್ಮವಾದರೂ ಆ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ. ಕೆಲವು ಸಾಮಾಜಿಕ ಜಾಲತಾಣಗಳಲ್ಲಿ, ಯೂಟೂಬರ್ ಗಳು ಈ ಕೃತ್ಯದಲ್ಲಿ ತೊಡಗಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಧಾರ್ಮಿಕ ಭಾವನೆ ಧಕ್ಕೆಯಾಗುವಂತಹ ವಿಡಿಯೋಗಳನ್ನು ೨೪ ಗಂಟೆಯೊಳಗೆ ತೆರವು ಗೊಳಿಸಬೇಕು, ಸಾಧು, ಸಂತರ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದ್ದು, ಅವರಿಗೆ ಸುರಕ್ಷತೆ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ