ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸದ ಸಸಿಕಾಂತ್ ಸೆಂಥಿಲ್ ಹೂಡಿರುವ ಮಾನನಷ್ಡ ಮೊಕದ್ದಮೆ ಕೇಸ್ ಎದುರಿಸಿಲು ನಾನು ಸಿದ್ಧ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಅವರು ಕಾನೂನು, ನ್ಯಾಯಾಲಯದ ಬಗ್ಗೆ ಮಾತನಾಡುತ್ತಿದ್ದಾರೆ. ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವುದು ಮಾತ್ರವಲ್ಲ, ಬೇಕಿದ್ದರೆ ಇದನ್ನು ಎನ್‌ಐಎ ತನಿಖೆಗೆ ನೀಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಿ. ಜೊತೆಗೆ ಈ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ ಅನ್ನೋದನ್ನು ಅವರು ನಿರೂಪಿಸಲಿ ಎಂದು ರೆಡ್ಡಿ ಸವಾಲು ಹಾಕಿದ್ದಾರೆ.
ನಾನು ಬಹಳ ಸ್ಪಷ್ಟವಾಗಿ ಶಶಿಕಾಂತ್ ಸೆಂಥಿಲ್ ಹೆಸರು ತೆಗೆದುಕೊಂಡೇ ಹೇಳಿದ್ದೇನೆ. ಈ ಬಗ್ಗೆ ಕಾನೂನಾತ್ಮಕವಾಗಿ ಹೋರಾಡಲು ಸಿದ್ಧನಿದ್ದೇನೆ. ಸಿಬಿಐಗೆ ದಾಖಲೆ ನೀಡಿದ್ದಕ್ಕೆ ನನ್ನ ಮೇಲೆ ಆರೋಪ ಮಾಡಿದ್ದಾರೆ ಎಂದು ಅವರು ಹೇಳುತ್ತಿದ್ದಾರೆ. ಇದು ಸುಮ್ಮನೆ ಮಾತನಾಡಬೇಕು ಎಂಬುದಕ್ಕೆ ಮಾತನಾಡಿದ ಹಾಗಿದೆ. ನಾನು ಬಂಧನಕ್ಕೊಳಗಾದ ಮಾರನೇ ದಿನ ಆತ ಬಳ್ಳಾರಿಗೆ ಬಂದಿರುವುದು ಎಂದು ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಧರ್ಮಸ್ಥಳ ಪ್ರಕರಣದಲ್ಲಿ ತನ್ನ ಪಾತ್ರ ಇಲ್ಲ ಎಂದು ನಿರೂಪಿಸಲಿ: ಮಾನನಷ್ಟ ಹೂಡಿದ ಸೆಂಥಿಲ್‌ಗೆ ರೆಡ್ಡಿ ಸವಾಲ್!
