Saturday, September 13, 2025

ನಾನು ಒಂದು ಕತೆ ಹೇಳ್ಲಾ…ಬಿಗ್ ಬಾಸ್ ನ ಹೊಸ ಪ್ರೋಮೋದೊಂದಿಗೆ ಬಂದ ಕಿಚ್ಚ ಸುದೀಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡದಲ್ಲಿ ಬಿಗ್ ಬಾಸ್ 12ನೇ ಸೀಸನ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೀಘ್ರದಲ್ಲೇ ಆರಂಭ ಆಗಲಿದೆ. ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡಲು ಸಜ್ಜಾಗಿದ್ದಾರೆ. ಇದೀಗ 2ನೇ ಪ್ರೋಮೋ ಬಿಡುಗಡೆಯಾಗಿದೆ.

ಕಿಚ್ಚ ಸುದೀಪ್ ವಿಶೇಷವಾದ ಗೆಟಪ್​​ನಲ್ಲಿ ಬಿಗ್ ಬಾಸ್ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ. ‘ಹನ್ನೊಂದು ಸೀಸನ್ ನೋಡಿರೋ ನಮಗೆ, ಎಲ್ಲಾ ಗೊತ್ತು ಅನ್ನೋರಿಗೆ ‘ಓ ಭ್ರಮೆ..’ ಅಂತಾರೆ ಬಿಗ್ ಬಾಸ್! ಇದು ಸೀಸನ್ ಹನ್ನೆರಡು, Expect the Unexpected!’ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರೋಮೋ ಹಂಚಿಕೊಳ್ಳಲಾಗಿದೆ.

ಈ ಸಲ ನೀವಿದ್ದೀರಾ.. ನೀವಿದ್ದೀರಾ ಅಂತಾ ಕೇಳ್ತಾ ಇದ್ದೋರು, ಈಗ ನೆಕ್ಸ್ಟ್ ಏನು.. ನೆಕ್ಸ್ಟ್ ಏನು.. ಅಂತಾ ಕೇಳ್ತಾ ಇದ್ದೀರಾ. ಒಂದು ಕತೆ ಹೇಳ್ಲಾ.. ಎಂದು ಕಿಚ್ಚ ಸುದೀಪ್ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ.

https://www.instagram.com/colorskannadaofficial/reel/DOiuXb3AZRk/

‘ಒಂದು ಊರಿನಲ್ಲಿ ಒಂದು ಕಾಗೆ ಇತ್ತು. ನೀವೆಲ್ಲಾ ಶಾಲೆಯಲ್ಲಿ ಕೇಳಿದ್ದೀರಲ್ಲ. ಅದೇ ಕಾಗೆನೇ. ಆ ಕಾಗೆಗೆ ಹಸಿವಾಗಿದ್ದಾಗ ವಡೆ ಮಾಡುತ್ತಿರುವ ಅಜ್ಜಿಯ ಬಳಿ ಹೋಗಿ, ಅಜ್ಜಿ.. ಅಜ್ಜಿ.. ನಂಗೋದು ವಡೆ ಕೊಡ್ತೀಯಾ ಅಂತ ಕೇಳಿದಾಗ ಅಜ್ಜಿ ಪ್ರೀತಿಯಿಂದ ಕಾಗೆಗೆ ಒಂದು ವಡೆ ಕೊಟ್ರು. ಕಾಗೆ ಆ ವಡೆನಾ ತಗೊಂಡು, ಹಾರ್ಕೊಂಡು ಹೋಗಿ ಮರದ ಮೇಲೆ ಕೂತು ಇನ್ನೇನು ವಡೆ ತಿನ್ನಬೇಕು ಅನ್ನೋ ಅಷ್ಟರಲ್ಲಿ ಒಬ್ಬನ ಎಂಟ್ರಿ.. ಅದು ವಿಲನ್. ಕಾಗೆ ಬಾಯಲಿದ್ದ ವಡೆಯನ್ನು ಕಿತ್ತುಕೊಳ್ಳಬೇಕು ಎಂದು ಸ್ಕೆಚ್ ಹಾಕಿದ್ದ ನರಿ, ಕಾಕಾ.. ಕಾಕಾ.. ನೀನು ಕೋಗಿಲೆ ತರಹ ಹಾಡನ್ನ ಹಾಡ್ತೀಯಾ.. ಹಾಗಾಗಿ ನನಿಗೋಸ್ಕರ ಒಂದು ಹಾಡು ಹಾಡ್ತೀಯಾ ಅಂತ ಕೇಳಿತು.. ನಿಮಗೆಲ್ಲ ಗೊತ್ತಿರೋ ಹಾಗೆ ಪಾಪ ಕಾಗೆ, ನರಿ ಮಾತನ್ನ ಕೇಳೋಕು, ಹಾಡೋದು ಶುರು ಮಾಡೋಕು, ವಡೆ ಕಾಗೆ ಬಾಯಿಂದ ಬೀಳೋಕು, ವಡೆ ನರಿ ಬಾಯಿಗೆ ಸೇರಬೇಕು ಅನ್ನೋವಾಗ… ನಿಮಗೆಲ್ಲ ಕ್ಲೈಮಾಕ್ಸ್ ಗೊತ್ತಿದೆ ಅಂತ ಅಂದುಕೊಂಡ್ರೆ… ಓ ಭ್ರಮೆ. ಈ ಸಲ ಬಿಗ್ ಬಾಸ್ ಹಾಗೇನೆ ನಾವು ‘ಹನ್ನೊಂದು ಸೀಸನ್ ನೋಡಿರೋ ನಮಗೆ, ಎಲ್ಲಾ ಗೊತ್ತು ಅನ್ನೋರಿಗೆ ‘ಓ ಭ್ರಮೆ..’ ಅಂತಾರೆ ಬಿಗ್ ಬಾಸ್ ಎಂದು ಈ ಪ್ರೋಮೋದಲ್ಲಿ ಹೇಳಲಾಗಿದೆ.

ಇದನ್ನೂ ಓದಿ