Friday, September 5, 2025

ಎಲ್ಲಾ ಧರ್ಮಕ್ಕೂ ನಾವು ಗೌರವ ಕೊಡೋಣ, ನಮ್ಮ ಧರ್ಮವನ್ನು ರಕ್ಷಣೆ ಮಾಡಿಕೊಳ್ಳೋಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಯಾವಾಗಲು ಬೇರೆ ಧರ್ಮದ ಪರವಾಗಿ ಇದ್ದೇವೆ ಅಂತ ಅನೇಕ ಸಮಯದಲ್ಲಿ ತೋರಿಸಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಸೆಪ್ಟೆಂಬರ್ 5 ರಂದು ಬೆಂಗಳೂರಿನಲ್ಲಿ ಮುಸ್ಲಿಂ ಧರ್ಮದ ಕಾರ್ಯಕ್ರಮ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಅವರು ಬೇರೆ ಧರ್ಮದ ಪರವಾಗಿ ಇದ್ದೇವೆ ಎಂದು ಅನೇಕ ಸಮಯದಲ್ಲಿ ಸಾಬೀತು ಮಾಡೋಕೆ ಹೊರಟಿದ್ದಾರೆ. ದಸರಾ (Mysuru Dasra) ಉದ್ಘಾಟನೆ ಬಾನು ಮುಷ್ತಾಕ್ ಅವರಿಂದ ಮಾಡೋ ಅವಶ್ಯಕತೆ ಇರಲಿಲ್ಲ. ಬಹಳ ಜನ ಸಾಧಕರು ಸಮಯದಲ್ಲಿ ಇದ್ದರು. ಬೇರೆಯವರನ್ನ ಕರೆದು ಮಾಡಬಹುದಿತ್ತು. ಆದರೆ ಈ ಸರ್ಕಾರದ ಹಿಂದಿನ ಉದ್ದೇಶಗಳೇನು? ಧರ್ಮ ಧರ್ಮದ ಬಗ್ಗೆ ಕಿಚ್ಚು ಹಬ್ಬಿಸಿ, ಒಬ್ಬರಿಗೊಬ್ಬರ ಮಧ್ಯೆ ದ್ವೇಷ ಕ್ರಿಯೇಟ್ ಮಾಡಿ ಇದರ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳೋ ಕೆಲಸ ಆಗಬಾರದು. ಎಲ್ಲಾ ಧರ್ಮಕ್ಕೂ ನಾವು ಗೌರವ ಕೊಡೋಣ. ನಮ್ಮ ಧರ್ಮವನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ