Lifestyle Change | ಫಿಟ್ ಆಗೋಕೆ ಮೊದಲು ಈ ಕೆಟ್ಟ ಅಭ್ಯಾಸ ಬಿಟ್ಟು ಬಿಡಿ

ಫಿಟ್ ಆಗಬೇಕು ಅಂದ್ರೆ ಜಿಮ್ ಸೇರೋದು, ಡಯಟ್ ಶುರು ಮಾಡೋದು, ಪ್ರೋಟೀನ್ ಫುಡ್ ತಿನ್ನೋದು ಇವೆಲ್ಲದರ ಬಗ್ಗೆ ನಾವು ಯೋಚಿಸ್ತೀವಿ. ಆದರೆ ನಿಜವಾದ ಬದಲಾವಣೆ ಶುರುವಾಗೋದು, ನಮ್ಮ ದಿನನಿತ್ಯದ ಕೆಲವು ಕೆಟ್ಟ ಹವ್ಯಾಸಗಳನ್ನು ಬಿಡೋದರಿಂದ. ಕೆಲವೊಂದು ಅಭ್ಯಾಸಗಳೇ ದೇಹದ ಆರೋಗ್ಯವನ್ನು ಮೌನವಾಗಿ ಹಾಳು ಮಾಡುತ್ತಿರುತ್ತವೆ. ಫಿಟ್ ಆಗೋದು ಹೊಸದನ್ನು ಸೇರಿಸಿಕೊಳ್ಳುವುದಲ್ಲ… ಮೊದಲು ದೇಹಕ್ಕೆ ಹಾನಿ ಮಾಡುವ ಹಳೆಯ ಹವ್ಯಾಸಗಳನ್ನು ಬಿಡೋದಲ್ಲೇ ನಿಜವಾದ ಆರಂಭ ಇದೆ.