October 8, 2026
Thursday, October 8, 2026
spot_img

Lifestyle Change | ಫಿಟ್ ಆಗೋಕೆ ಮೊದಲು ಈ ಕೆಟ್ಟ ಅಭ್ಯಾಸ ಬಿಟ್ಟು ಬಿಡಿ

ಫಿಟ್ ಆಗಬೇಕು ಅಂದ್ರೆ ಜಿಮ್ ಸೇರೋದು, ಡಯಟ್ ಶುರು ಮಾಡೋದು, ಪ್ರೋಟೀನ್ ಫುಡ್ ತಿನ್ನೋದು ಇವೆಲ್ಲದರ ಬಗ್ಗೆ ನಾವು ಯೋಚಿಸ್ತೀವಿ. ಆದರೆ ನಿಜವಾದ ಬದಲಾವಣೆ ಶುರುವಾಗೋದು, ನಮ್ಮ ದಿನನಿತ್ಯದ ಕೆಲವು ಕೆಟ್ಟ ಹವ್ಯಾಸಗಳನ್ನು ಬಿಡೋದರಿಂದ. ಕೆಲವೊಂದು ಅಭ್ಯಾಸಗಳೇ ದೇಹದ ಆರೋಗ್ಯವನ್ನು ಮೌನವಾಗಿ ಹಾಳು ಮಾಡುತ್ತಿರುತ್ತವೆ.

  • ರಾತ್ರಿ ತಡವಾಗಿ ಮಲಗೋದು ದೇಹದ ರಿಕವರಿ ಮತ್ತು ಹಾರ್ಮೋನ್ ಬ್ಯಾಲೆನ್ಸ್ ಮೇಲೆ ಪರಿಣಾಮ ಬೀರುತ್ತದೆ. ನಿದ್ರೆ ಸರಿಯಾಗಿಲ್ಲ ಅಂದ್ರೆ ಫಿಟ್ನೆಸ್ ಗುರಿ ಸಾಧಿಸೋದು ಕಷ್ಟ.
  • ಕೆಲಸದ ಒತ್ತಡದಲ್ಲಿ ಗಂಟೆಗಳ ಕಾಲ ಕುಳಿತುಕೊಂಡೇ ಇದ್ದರೆ ದೇಹ ಚಲನೆ ಕಡಿಮೆ ಆಗಿ ಮೆಟಾಬಾಲಿಸಂ ನಿಧಾನವಾಗುತ್ತದೆ. ಮಧ್ಯ ಮಧ್ಯೆ ಎದ್ದು ನಡೆದಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು.
  • ಬೋರ್ ಆಯ್ತು, ಸ್ಟ್ರೆಸ್ ಆಯ್ತು ಅಂದ್ರೆ ಏನಾದರೂ ತಿನ್ನೋ ಅಭ್ಯಾಸ ತೂಕ ಹೆಚ್ಚಲು ಕಾರಣವಾಗಬಹುದು. ದೇಹಕ್ಕೆ ಬೇಕಾದಾಗ ಮಾತ್ರ ತಿನ್ನುವುದು ಉತ್ತಮ.
  • ನೀರು ಕಡಿಮೆ ಕುಡಿದರೆ ದೇಹ ಬೇಗ ದಣಿಯುತ್ತದೆ, ಜೀರ್ಣಕ್ರಿಯೆಯೂ ಸರಿಯಾಗಿ ಆಗೋದಿಲ್ಲ.
  • ‘ನಾಳೆಯಿಂದ ಶುರು’ ಅನ್ನೋ ಅಭ್ಯಾಸನೇ ಫಿಟ್ನೆಸ್‌ನಲ್ಲಿ ದೊಡ್ಡ ಶತ್ರು. ಮುಂದೂಡುವ ಅಭ್ಯಾಸ ಬಿಡಿ. ಸಣ್ಣದಾಗಿ ಆದರೂ ಇಂದೇ ಶುರು ಮಾಡಿ.

ಫಿಟ್ ಆಗೋದು ಹೊಸದನ್ನು ಸೇರಿಸಿಕೊಳ್ಳುವುದಲ್ಲ… ಮೊದಲು ದೇಹಕ್ಕೆ ಹಾನಿ ಮಾಡುವ ಹಳೆಯ ಹವ್ಯಾಸಗಳನ್ನು ಬಿಡೋದಲ್ಲೇ ನಿಜವಾದ ಆರಂಭ ಇದೆ.

Must Read