Thursday, December 11, 2025

ಶಾಲಾ‌ ಮಕ್ಕಳಿಗೆ ಲೈಂಗಿಕ ಕಿರುಕುಳ ‌ಆರೋಪ: ಶಿಕ್ಷಕನಿಗೆ ಧರ್ಮದೇಟು ‌ನೀಡಿದ ಸ್ಥಳೀಯರು

ಹೊಸದಿಗಂತ ವರದಿ,ಹಾವೇರಿ:

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ‌ ಆರೋಪದ ಹಿನ್ನೆಲೆಯಲ್ಲಿ, ಶಿಕ್ಷಕನಿಗೆ ಪೋಷಕರು ಹಾಗೂ ಸ್ಥಳೀಯರು ಧರ್ಮದೇಟು ನೀಡಿದ ಘಟನೆ ಹಾವೇರಿ ಜಿಲ್ಲೆ ಸವಣೂರಿನಲ್ಲಿ ನಡೆದಿದೆ.

ಅಲ್ಲದೇ ಶಾಲಾಯಿಂದ ಪೊಲೀಸ್ ಠಾಣೆಯವರೆಗೆ ಧರ್ಮದೇಟು ನೀಡುತ್ತಾ, ಚಪ್ಪಲಿ ಹಾರ ಹಾಕಿಕೊಂಡು ಪೊಲೀಸ್ ಠಾಣೆಗೆ ಕರೆ ತಂದ ಘಟನೆ ಸವಣೂರು ಪಟ್ಟಣದ ಸರ್ಕಾರಿ ಉರ್ದು ಉನ್ನತೀಕರಿಸಿದ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಇಂಗ್ಲೀಷ್ ಭಾಷಾ ಶಿಕ್ಷಕ ಜಗದೀಶ
ಧರ್ಮದೇಟು ತಿಂದವರು. ಕಳೆದ ಮೂರು ವರ್ಷಗಳಿಂದ ಇಂಗ್ಲೀಷ್ ಶಿಕ್ಷಕನಾಗಿ ಈ‌ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ಎರಡು‌ ತಿಂಗಳಿನಿಂದ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತು ವಿದ್ಯಾರ್ಥಿನಿಯರು ಪೋಷಕರಿಗೆ ತಿಳಿಸಿದ್ದು, ಶಾಲೆಗೆ ಆಗಮಿಸಿದ ಪೋಷಕರು ಶಿಕ್ಷಕ ಜಗದೀಶ್ ಗೆ ಧರ್ಮದೇಟು ನೀಡಿ, ಸುಮಾರು ಒಂದುವರೆ ಕಿಲೋಮೀಟರ್ ದೂರದ ಪೋಲಿಸ್ ಠಾಣೆಗೆ ಚಪ್ಪಲಿ ಹಾರ ಹಾಕಿಕೊಂಡು ಬಂದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿಕ್ಷಕ ಜಗದೀಶಗೆ ತಕ್ಕ ಶಿಕ್ಷೆಯಾಗಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.

ಈ ಕುರಿತು ಸವಣೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

error: Content is protected !!