Friday, September 26, 2025

ಅಂಕೋಲಾ ಉಪ ನೋಂದಣಿ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ದಾಳಿ

ಹೊಸದಿಗಂತ ವರದಿ, ಅಂಕೋಲಾ

ಅಂಕೋಲಾ ತಾಲೂಕಿನ ಉಪ ನೋಂದಣಿ ಅಧಿಕಾರಿಗಳ ಕಚೇರಿಗೆ ಗುರುವಾರ ಸಂಜೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಹಲವು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಲೋಕಾಯುಕ್ತ ಅಧಿಕಾರಿ ವಿನಾಯಕ ಮತ್ತು ವಿಜಯ್ ನೇತೃತ್ವದಲ್ಲಿ ಏಳು ಜನರ ತಂಡ ದಾಳಿ ನಡೆಸಿದ್ದು ಸರ್ಚ್ ವಾರೆಂಟ್ ಸಹಿತ ದಾಳಿ ಮಾಡಿರುವ ಅಧಿಕಾರಿಗಳು ಸುಮಾರು ನಾಲ್ಕು ಗಂಟೆಗಳಿಗೂ ಅಧಿಕ ಸಮಯ ದಾಖಲೆಗಳ ಪರಿಶೀಲನೆ ನಡೆಸಿ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.

ತಾಲೂಕಿನ ಉಪ ನೋಂದಣಿ ಅಧಿಕಾರಿಗಳ ಕಛೇರಿಯ ಕಾರ್ಯವೈಕರಿ, ವಿಳಂಬ ಧೋರಣೆಗಳ ಕುರಿತು ಸಾರ್ವಜನಿಕರಿಂದ ಅಸಮಾಧಾನದ ಮಾತುಗಳು ಕೇಳಿ
ಬರುತಿತ್ತು ಯಾವುದೋ ನಿರ್ಧಿಷ್ಟ ದೂರಿನ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆಯೋ ಎನ್ನುವ ಕುರಿತು ಮಾಹಿತಿ ಲಭ್ಯವಾಗಬೇಕಿದೆ.

ಇದನ್ನೂ ಓದಿ