Thursday, September 11, 2025

ಮದ್ದೂರು ಈಗ ಶಾಂತವಾಗಿದೆ, ಬಿಜೆಪಿ ಬಂದ್ ಮಾಡಿದ್ದೇ ಶಾಂತಿ ಕದಡೋಕೆ: ಚಲುವರಾಯಸ್ವಾಮಿ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದ್ದೂರು ಈಗ ಶಾಂತವಾಗಿದೆ. ಬಿಜೆಪಿ ಬಂದ್ ಮಾಡಿದ್ದೇ ಶಾಂತಿ ಕದಡೋಕೆ ಎಂದು ಸಚಿವ ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ.

ಈಗ ಎಲ್ಲವೂ ಶಾಂತವಾಗಿದೆ. ಆರಂಭದಲ್ಲಿ ಆದ ಘಟನೆ ಬಗ್ಗೆ ನಾವು ಕ್ರಮ ತೆಗೆದುಕೊಂಡಿದ್ದೇವೆ. ಘಟನೆಗೆ ಕಾರಣರಾದವರನ್ನು ಬಂಧಿಸಲಾಗಿದೆ. ಯಾವುದೇ ಮುಲಾಜಿಲ್ಲದೇ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಆದರೂ ಬಿಜೆಪಿಯವರು ಬಂದ್ ಮಾಡಿದ್ದಾರೆ. ಅವರು ವಾತಾವರಣವನ್ನು ಕಲುಷಿತ ಮಾಡಲು ಹೀಗೆ ಮಾಡಿದ್ರಾ? ಅಂತಾ ಅವರೇ ಯೋಚನೆ ಮಾಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ