Saturday, August 30, 2025

ಕುಡಿಯದಿದ್ದರೂ ಬಿತ್ತು 10 ಸಾವಿರ ದಂಡ: ಹೈಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡ್ರಿಂಕ್ ಅಂಡ್ ಡ್ರೈವ್ ಪತ್ತೆ ಹಚ್ಚುವ ಯಂತ್ರದ ಲೋಪ ಕಂಡುಬಂದಿದ್ದು, ಓರ್ವ ಚಾಲಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಸಂಚಾರ ಪೊಲೀಸರು ಈ ಡ್ರಿಂಕ್ ಆ್ಯಂಡ್ ಡ್ರೈವ್ ಮಾಡುವವರ ವಿರುದ್ಧು ದೂರು ದಾಖಲಿಸಿಕೊಂಡು ದಂಡ ವಿಧಿಸುತ್ತಾರೆ. ಆದರೆ ಕೆಲವೊಮ್ಮೆ ಮದ್ಯಪಾನ ಮಾಡದಿದ್ದರೂ ಯಂತ್ರದಲ್ಲಿ ಪಾಸಿಟಿವ್ ತೋರಿಸುತ್ತದೆ. ಇದೀಗ ಅಂತಹದೇ ಒಂದು ಘಟನೆ ನಗರದಲ್ಲಿ ನಡೆದಿದೆ.

ಅಜಯ್ ಕುಮಾರ್ ಕಶ್ಯಪ್ ಎಂಬುವವರು ಕಾರು ಚಾಲನೆ ಮಾಡುವಾಗ ಟ್ರಾಫಿಕ್ ಪೊಲೀಸರು ತಡೆದಿದ್ದರು. ಮದ್ಯಪಾನ ಮಾಡದಿದ್ದರೂ ಯಂತ್ರದಲ್ಲಿ ಎರಡು ಬಾರಿ ನೆಗೆಟಿವ್ ತೋರಿಸಿ 3ನೇ ಬಾರಿ ಪಾಸಿಟಿವ್ ತೋರಿಸಿದೆ. ತಾನು ಕುಡಿದಿಲ್ಲವೆಂದು ಹೇಳಿದರೂ ಒಪ್ಪದ ಪೊಲೀಸರು ಅವರ ಕಾರು ಸೀಜ್ ಮಾಡಿ 10 ಸಾವಿರ ರೂ. ದಂಡ ವಿಧಿಸಿದ್ದಾರೆ.

ಬಳಿಕ ಅಜಯ್ ಕುಮಾರ್ ಕಶ್ಯಪ್​ ಅವರು ತಾವೇ ಖಾಸಗಿ ಲ್ಯಾಬ್​ನಲ್ಲಿ ಟೆಸ್ಟ್ ಮಾಡಿಸಿದ್ದು ಆಗಲೂ ನೆಗೆಟಿವ್ ಬಂದಿದೆ. ಹೀಗಾಗಿ ಡ್ರಿಂಕ್ ಆ್ಯಂಡ್​​​ ಡ್ರೈವ್ ಪತ್ತೆ ಯಂತ್ರದಲ್ಲೇ ಲೋಪವಿದೆ ಎಂದು ಆರೋಪಿಸಿ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

ಇಂದು ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್​, ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿದೆ. ಯಂತ್ರದಲ್ಲೇ ಲೋಪವಿದ್ದಾಗ ಕುಡಿತದ ಆರೋಪ ಒಪ್ಪಲಾಗುವುದಿಲ್ಲ. ಹೀಗಾಗಿ ಈ ಯಂತ್ರಗಳ ವಿಶ್ವಾಸಾರ್ಹತೆ ಬಗ್ಗೆ ಸರ್ಕಾರ ಉತ್ತರಿಸಬೇಕು ಎಂದು ನ್ಯಾ.ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ಪಟ್ಟಿದ್ದು, ಜೊತೆಗೆ ಸರ್ಕಾರ ಮತ್ತು ಟ್ರಾಫಿಕ್ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.

ಇದನ್ನೂ ಓದಿ