Monday, December 8, 2025

ʻಮಾರ್ಕ್ ಜೊತೆ ʻಸ್ಟಾರ್ʼ ನಟರ ಸಿನಿಮಾಗಳು ರಿಲೀಸ್: ಈ ಕುರಿತು ಕಿಚ್ಚ ಸುದೀಪ್ ಏನಂದ್ರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಿಚ್ಚ ಸುದೀಪ್ ನಟಿಸಿರುವ ಬಹುನಿರೀಕ್ಷಿತ ʻಮಾರ್ಕ್ʼ ಸಿನಿಮಾ ಟ್ರೇಲರ್ ರಿಲೀಸ್ ಆಗಿದೆ. ಡಿಸೆಂಬರ್ 25ರಂದು ತೆರೆಗೆ ಬರಲಿದೆ.

ಇತ್ತ ಸೆಂಬರ್‌ನಲ್ಲಿ ಸ್ಟಾರ್‌ ನಟರ ಸಿನಿಮಾಗಳು ಒಟ್ಟೊಟ್ಟಿಗೆ ತೆರೆಗೆ ಬರುತ್ತಿವೆ. ಈ ಬಗ್ಗೆ ಅಭಿಪ್ರಾಯ ಕೇಳಿದಾಗ, ಸುದೀಪ್ “ಡಿಸೆಂಬರ್ 25ರಂದು ತೆರೆಗೆ ಬರುತ್ತಿರುವ ಸಿನಿಮಾಗಳ ಬಗ್ಗೆ ಮಾತ್ರ ಮಾತಾಡಿ” ಎಂದಿದ್ದಾರೆ. ಅಂದಹಾಗೆ, ಡಿಸೆಂಬರ್ 25ರಂದು ಮಾರ್ಕ್‌ ಜೊತಗೆ ಶಿವರಾಜ್‌ಕುಮಾರ್‌, ಉಪೇಂದ್ರ ಅವರ 45 ಸಿನಿಮಾ ಕೂಡ ರಿಲೀಸ್‌ ಆಗುತ್ತಿದೆ.

ದೀಪಾವಳಿ ಬಂದರೆ ಕರ್ನಾಟಕದಲ್ಲಿ ಎಲ್ಲರ ಮನೆಯಲ್ಲಿಯೂ ಹಬ್ಬ. ಹಾಗಂತ ಅಂದು ಮಾರ್ಕೆಟ್‌ನಲ್ಲಿ ತರಕಾರಿ‌ ಕಮ್ಮಿ ಆಗಲ್ಲ, ಮನೆಯಲ್ಲಿ ಅಡುಗೆ‌ ಕಮ್ಮಿಯಾಗಿಲ್ಲ. ಇನ್ನೂ ಸೀಟ್ ಗಳು ಹೇಗೆ ಕಡಿಮೆಯಾಗುತ್ತವೆ? ಜನ ಬರದೇ ಇರ್ತಾರಾ. ಎಂದು ಕಿಚ್ಚ ಸುದೀಪ್‌ ಕೇಳಿದರು.

ಇಡೀ ಚಿತ್ರರಂಗ ಇವತ್ತು ಇಲ್ಲಿದೆ. ಈ ರೀತಿ ಕಾರ್ಯಕ್ರಮ ತಿಂಗಳಲ್ಲಿ 3-4 ನಡೆಯುತ್ತಿವೆ. ಮಾರ್ಕ್ ಟ್ರೇಲರ್, ಸಾಂಗ್ ನೋಡಿದಮೇಲೆ ಎದುಸಿರು ತೆಗೆದುಕೊಂಡೆ. ಸುದೀಪ್ ಅವರು ಸೆಟ್ ನಲ್ಲಿ ಎಲ್ಲರ ಗಮನಸೆಳೆದು, ಖುಷಿಯಾಗಿ ಇಡುತ್ತಾರೆ. ನಿರ್ದೇಶಕರದ್ದು ಎರಡನೇ ಚಿತ್ರ ಚೆನ್ನಾಗಿ ಮಾಡಿದ್ದಾರೆ. ಸತ್ಯ ಜ್ಯೋತಿ ತಮಿಳುನಾಡಿನಲ್ಲಿ ದೊಡ್ಡ ಬ್ಯಾನರ್. ಅವರು ಸುದೀಪ್ ಅವರ ಜೊತೆ ಚಿತ್ರ ಮಾಡಿರುವುದು ಖುಷಿ. ಚಿತ್ರದಲ್ಲಿ ಮಾಡಿದ ಎಲ್ಲಾ ಕಲಾವಿದರು ಚೆನ್ನಾಗಿ ನಟಿಸಿದ್ದಾರೆ ಎಂದರು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್.

error: Content is protected !!