Monday, September 22, 2025

ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿ ಅಪಮಾನ: ಮುಸುಕುಧಾರಿ ಮಹಿಳೆ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾಸನ ಜಿಲ್ಲೆಯ ಬೇಲೂರಲ್ಲಿ ಗಣೇಶ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಓರ್ವ ಮುಸುಕುಧಾರಿ ಮಹಿಳೆಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯನ್ನು ಹಾಸನದ ಗುಡ್ಡೇನಹಳ್ಳಿಯ ಲೀಲಮ್ಮ ಎಂಬುದಾಗಿ ಗುರುತಿಸಲಾಗಿದೆ.

ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದಂತ ಮುಸುಕುಧಾರಿ ಮಹಿಳೆಯನ್ನು ಪಿಎಸ್ಐ ಸುರೇಶ್ ಹಾಗೂ ಶೋಭಾ ನೇತೃತ್ವದ ತಂಡವು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದೆ.

ಇಂದು ಮಹಾಲಯ ಅಮವಾಸ್ಯೆ ಪ್ರಯುಕ್ತ ಬೇಲೂರಿನ ಶ್ರೀ ವಿದ್ಯಾ ಗಣಪತಿ ದೇವಸ್ಥಾನಕ್ಕೆ ಲೀಲಮ್ಮ ತೆರಳಿದ್ದರು. ಈ ವೇಳೆ ಗಣೇಶ ಮೂರ್ತಿಗೆ ಚಪ್ಪಲಿಹಾರ ಹಾಕಿ ವಿಕೃತಿ ಮೆರೆದಿದ್ದರು.

ಇದನ್ನೂ ಓದಿ