Friday, September 5, 2025

2300 ಕೋಟಿ ಬೆಟ್ಟಿಂಗ್ ಹಗರಣದ ಮಾಸ್ಟರ್ ಮೈಂಡ್ ದುಬೈನಿಂದ ಭಾರತಕ್ಕೆ ಹಸ್ತಾಂತರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್ ಪೊಲೀಸರು ಮತ್ತು ಸಿಬಿಐ ಗುಜರಾತ್‌ನ ಅತಿದೊಡ್ಡ 2300 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ಕ್ರಿಕೆಟ್ ಬೆಟ್ಟಿಂಗ್ ಹಗರಣದ ಪರಾರಿಯಾಗಿದ್ದ ಮಾಸ್ಟರ್ ಮೈಂಡ್ ಹರ್ಷಿತ್ ಜೈನ್ ನನ್ನು ದುಬೈ ನಲ್ಲಿ ಪತ್ತೆಹಚ್ಚಿ ವಾಪಸ್ ಕರೆತಂದಿದ್ದಾರೆ.

ಮಾರ್ಚ್ 2023ರಲ್ಲಿ ಪೊಲೀಸ್ ದಾಳಿಯ ನಂತರ ದುಬೈಗೆ ಪಲಾಯನ ಮಾಡಿದ್ದ ಜೈನ್‌ರನ್ನು ಇಂಟರ್‌ಪೋಲ್ ಹೊರಡಿಸಿದ ರೆಡ್ ಕಾರ್ನರ್ ನೋಟಿಸ್ ನಂತರ ಅಹಮದಾಬಾದ್‌ಗೆ ಹಸ್ತಾಂತರಿಸಲಾಯಿತು.

ಹರ್ಷಿತ್ ಬಾಬುಲಾಲ್ ಜೈನ್ ನನ್ನು ದುಬೈನಲ್ಲಿ ಬಂಧಿಸಲಾಗಿದ್ದ ಅಂತರ-ಸಂಸ್ಥೆಯ ಕ್ರಮದ ನಂತರ ಸೆಪ್ಟೆಂಬರ್ 5ರಂದು ಭಾರತಕ್ಕೆ ಕರೆತರಲಾಯಿತು. ಬೆಟ್ಟಿಂಗ್ ದಂಧೆಯ ಪ್ರಮುಖ ಆರೋಪಿ ಹರ್ಷಿತ್ ಜೈನ್ ಭಾರತದಿಂದ ಪರಾರಿಯಾಗಿದ್ದನು. ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ನಾವು ಕೇಂದ್ರ ಸಂಸ್ಥೆಗಳ ಸಹಯೋಗದೊಂದಿಗೆ ಶೋಧ ಕಾರ್ಯಾಚರಣೆ ನಡೆಸಿ ಲುಕ್ಔಟ್ ನೋಟಿಸ್ ನೀಡಲಾಗಿತ್ತು.

ಗುಜರಾತ್ ಗೃಹ ಸಚಿವಾಲಯ, ಗೃಹ ವ್ಯವಹಾರ ಸಚಿವಾಲಯ ಮತ್ತು ವಿದೇಶಾಂಗ ಸಚಿವಾಲಯದ ಮೂಲಕ ದುಬೈ ಅಧಿಕಾರಿಗಳಿಗೆ ಅವರನ್ನು ಭಾರತಕ್ಕೆ ಮರಳಿ ಕರೆತರಲು ಔಪಚಾರಿಕ ಪ್ರಸ್ತಾವನೆಯನ್ನು ಕಳುಹಿಸಲಾಯಿತು. ಈ ಪ್ರಸ್ತಾವನೆಯ ಆಧಾರದ ಮೇಲೆ, ಅವರನ್ನು ಸೆಪ್ಟೆಂಬರ್ 5, 2025 ರಂದು ಗಡೀಪಾರು ಮಾಡಲಾಯಿತು ಇನ್ನು ವಿಮಾನ ನಿಲ್ದಾಣದಿಂದ ನೇರವಾಗಿ ಎಸ್‌ಎಂಸಿ ವಶಕ್ಕೆ ಪಡೆಯಲಾಯಿತು ಎಂದು ರಾಜ್ಯ ಕಣ್ಗಾವಲು ಕೋಶದ ಡಿಐಜಿ ನಿರ್ಲಿಪ್ತಾ ರೈ ಹೇಳಿದ್ದಾರೆ.

ಇದನ್ನೂ ಓದಿ