Wednesday, November 26, 2025

2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್‌ ನತ್ತ ಮೀರಾಬಾಯಿ ಚಾನು: 53 ಕೆಜಿ ವಿಭಾಗದಲ್ಲಿ ಸ್ಪರ್ಧೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತದ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಅವರ ತೂಕ ವರ್ಗವನ್ನು 2028 ರ ಒಲಿಂಪಿಕ್ಸ್‌ನಿಂದ ಕೈಬಿಡಲಾಗಿದ್ದು, ಹೀಗಾಗಿ ಅವರು 2028 ರ ಕ್ರೀಡಾಕೂಟಕ್ಕಾಗಿ 53 ಕೆಜಿ ವಿಭಾಗದವರೆಗೆ ತೂಕ ಹೆಚ್ಚಿಸಿಕೊಳ್ಳಲು ಸಜ್ಜಾಗಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ 49 ಕೆಜಿ ವಿಭಾಗದಲ್ಲಿ ಚಾನು ಬೆಳ್ಳಿ ಪದಕ ಗೆದ್ದಿದ್ದರು. ಆದಾಗ್ಯೂ, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಒಟ್ಟು ವೇಟ್‌ಲಿಫ್ಟಿಂಗ್ ಸ್ಪರ್ಧೆಗಳ ಸಂಖ್ಯೆಯನ್ನು 12 ಕ್ಕೆ ಹೆಚ್ಚಿಸುವ ನಿರ್ಧಾರದ ನಂತರ, 2028 ರ ಲಾಸ್ ಏಂಜಲೀಸ್ ಕ್ರೀಡಾಕೂಟದಲ್ಲಿ ಮಹಿಳೆಯರ ಅತ್ಯಂತ ಕಡಿಮೆ ವಿಭಾಗವು ಈಗ 53 ಕೆಜಿ ಆಗಿದೆ.

ವೇಟ್‌ಲಿಫ್ಟಿಂಗ್ ಫೆಡರೇಶನ್ 49 ಕೆಜಿ ವಿಭಾಗವನ್ನು ತೆಗೆದುಹಾಕಿದ್ದು, 2025ರ ಲಾಸ್ ಏಂಜಲೀಸ್ ಗೇಮ್ಸ್‌ನಲ್ಲಿ ಮಹಿಳಾ ಕ್ರೀಡಾಪಟುಗಳಿಗೆ 53 ಕೆಜಿ ವಿಭಾಗವನ್ನು ಕನಿಷ್ಠ ತೂಕ ವಿಭಾಗವನ್ನಾಗಿ ಪರಿಗಣಿಸಿದೆ. ಪುರುಷರಿಗೆ ಕನಿಷ್ಠ ತೂಕ ವಿಭಾಗ 65 ಕೆಜಿ ಆಗಿದೆ.

ಹೀಗಾಗಿ 53 ಕೆಜಿ ವರೆಗೆ ತೂಕ ಹೆಚ್ಚಿಸಿಕೊಳ್ಳುವುದು ಚಾನು ಪರವಾಗಿ ಕೆಲಸ ಮಾಡುತ್ತದೆ ಎಂದು ಮುಖ್ಯ ರಾಷ್ಟ್ರೀಯ ತರಬೇತುದಾರ ವಿಜಯ್ ಶರ್ಮಾ ಹೇಳಿದ್ದಾರೆ. ಆದರೆ ಮಣಿಪುರಿ ಚಾನು ಮುಂದಿನ ವರ್ಷದ ಏಷ್ಯನ್ ಕ್ರೀಡಾಕೂಟದವರೆಗೆ ತನ್ನ ಹಳೆಯ ತೂಕದ ವರ್ಗದಲ್ಲೇ ಮುಂದುವರಿಯಲಿದ್ದಾರೆ ಎಂದು ಹೇಳಿದರು.

error: Content is protected !!