Wednesday, September 24, 2025

ಮಗು ಅಳಬಾರದೆಂದು ಬಾಯಿಗೆ ಕಲ್ಲು ಹಾಕಿ, ಟೇಪ್‌ ಅಂಟಿಸಿದ ದುರುಳರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಸ್ಥಾನದ ಭಿಲ್ವಾರದಲ್ಲಿ 15 ದಿನಗಳ ಶಿಶು ಪತ್ತೆಯಾಗಿದೆ. ಅದರ ಪುಟ್ಟ ತುಟಿಗಳಿಗೆ ಗಮ್ ಅಂಡಿಸಲಾಗಿತ್ತು, ಅಳಲು ಆಗದಂತೆ ಬಾಯಿಗೆ ಕಲ್ಲುಗಳನ್ನು ತುಂಬಿಸಿ ಅಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ನಡೆದಿದೆ.ವ್ಯಕ್ತಿಯೊಬ್ಬರು ಶಿಶುವನ್ನು ಕಂಡು, ಹೇಗೋ ಮಾಡಿ ಬಾಯಿ ತೆರೆಯಲು ಯಶಸ್ವಿಯಾದರೂ ಕೂಡ ಬಾಯೊಳಗೆ ತುಂಬಿದ್ದ ಕಲ್ಲು ನೋಡಿ ದಿಗ್ಭ್ರಮೆಗೊಂಡಿದ್ದಾರೆ.

ಮಗುವನ್ನು ಕೊಲ್ಲಲು ಅದೆಷ್ಟೇ ಪ್ರಯತ್ನಗಳು ನಡೆದಿದ್ದರೂ, ಅದೃಷ್ಟವಶಾತ್ ಅದು ಬದುಕುಳಿದಿದೆ. ದನ ಕಾಯುವವರೊಬ್ಬರು ಕಾಡಿನಲ್ಲಿ ಮಗುವನ್ನು ನೋಡಿ ಅದರ ಬಾಯಿಯಿಂದ ಕಲ್ಲನ್ನು ಹೊರತೆಗೆದರು. ತಕ್ಷಣ ಅವನನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಮಗು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದೆ.

ಭಿಲ್ವಾರದ ಮಂಡಲಗಢ ವಿಧಾನಸಭಾ ಕ್ಷೇತ್ರದ ಬಿಜೋಲಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದೆ. ಸೀತಾ ಕುಂಡ್ ದೇವಾಲಯದ ಮುಂಭಾಗದ ರಸ್ತೆಯ ಪಕ್ಕದ ಕಾಡಿನಲ್ಲಿ ಮಗು ಪತ್ತೆಯಾಗಿದೆ ಎಂದು ಪೊಲೀಸರು ವರದಿ ಮಾಡಿದ್ದಾರೆ.

ಇದನ್ನೂ ಓದಿ