ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ ಇಂದು ಅವರಬಯೋಪಿಕ್ ಅನೌನ್ಸ್ ಆಗಿದೆ. ನರೇಂದ್ರ ಮೋದಿ ಪಾತ್ರದಲ್ಲಿ ಮಲಯಾಳಂ ನಟ ಉನ್ನಿ ಮುಕುಂದನ್ ಅವರು ನಟಿಸುತ್ತಿದ್ದಾರೆ.
ಸಿಲ್ವರ್ ಕ್ಯಾಸ್ಟ್ ಕ್ರಿಯೇಷನ್ಸ್ ಎಂಬ ನಿರ್ಮಾಣ ಸಂಸ್ಥೆ ಮಾ ವಂದೇ ಸಿನಿಮಾವನ್ನು ಘೋಷಣೆ ಮಾಡಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಜೀವನ ಆಧಾರಿತ ಸಿನಿಮಾವಾಗಿದೆ. ವೀರ್ ರೆಡ್ಡಿ ಎಂ. ನಿರ್ಮಿಸಿರುವ ಈ ಚಿತ್ರದಲ್ಲಿ ಮಲಯಾಳಂ ನಟ ಉನ್ನಿ ಮುಕುಂದನ್ ನರೇಂದ್ರ ಮೋದಿಯವರ ಪಾತ್ರದಲ್ಲಿ ನಟಿಸಲಿದ್ದಾರೆ.
ಕ್ರಾಂತಿ ಕುಮಾರ್ ಸಿ.ಎಚ್ ನಿರ್ದೇಶಿಸಲಿರುವ ಮಾ ವಂದೇ ಸಿನಿಮಾ ಇದಾಗಿದೆ. ಚಿಕ್ಕ ಹುಡುಗನಿಂದ ಭಾರತದ ಪ್ರಧಾನಿಯಾಗುವವರೆಗಿನ ಮೋದಿಯವರ ಪ್ರಯಾಣವನ್ನು ಚಿತ್ರದಲ್ಲಿ ಕಟ್ಟಿಕೊಡಲಾಗುವುದು. ಈ ಚಿತ್ರವು ಅವರ ವೈಯಕ್ತಿಕ ಮತ್ತು ರಾಜಕೀಯ ಜೀವನ ಮತ್ತು ಸತ್ಯ ಘಟನೆಗಳ ಆಧಾರದ ಮೇಲೆ ಮೂಡಿ ಬರಲಿದೆ. ಈ ಸಿನಿಮಾವು ಕನ್ನಡದ ಜೊತೆ ಹಲವು ಭಾಷೆಯಲ್ಲಿ ಮೂಡಿ ಬರಲಿದೆ.
ಇಂದು ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ. ಅವರ ಹುಟ್ಟುಹಬ್ಬದ ಅಂಗವಾಗಿ ಸಿಲ್ವರ್ ಕ್ಯಾಸ್ಟ್ ಕ್ರಿಯೇಷನ್ಸ್ ಎಂಬ ನಿರ್ಮಾಣ ಸಂಸ್ಥೆ ಮಾ ವಂದೇ ಚಿತ್ರ ಘೋಷಣೆ ಮಾಡಿದೆ.
ಮಾ ವಂದೇ ಸಿನಿಮಾವನ್ನು ಎಲ್ಲ ವರ್ಗಗಳ ಪ್ರೇಕ್ಷಕರನ್ನು ಗುರಿಯಾಗಿ ಇಟ್ಟುಕೊಂಡು ರಚಿಸಲಾಗುವುದು. ಸಮಾಜದ ಕನಸುಗಳನ್ನು ಹೊಂದಿರುವ ಬಾಲ್ಯ, ಭಾರತದ ಪ್ರಧಾನಿಯಾಗುವವರೆಗಿನ ಮೋದಿಯವರ ಪ್ರಯಾಣವನ್ನು ಈ ಸಿನಿಮಾದಲ್ಲಿ ಕಟ್ಟಿಕೊಡಲಾಗುವುದು. ಈ ಸಿನಿಮಾವು ಅವರ ವೈಯಕ್ತಿಕ ಮತ್ತು ರಾಜಕೀಯ ಜೀವನ ಮತ್ತು ಸತ್ಯ ಘಟನೆಗಳ ಆಧಾರದ ಮೇಲೆ ಚಿತ್ರ ಮೂಡಿ ಬರಲಿದೆ.