ಹೆತ್ತ ಕಂದಮ್ಮನನ್ನೇ ಕಸದ ರಾಶಿಗೆ ಎಸೆದ ತಾಯಿ: ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಹಸುಗೂಸು ರಕ್ಷಣೆ

ಹೊಸದಿಗಂತ ವರದಿ ಕಲಬುರಗಿ: ಹೆತ್ತ ಹಸುಗೂಸನ್ನೇ ಕಸದ ರಾಶಿಗೆ ಎಸೆದು ಪರಾರಿಯಾಗಲು ಯತ್ನಿಸಿದ ಘಟನೆ ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿ ಗ್ರಾಮದಲ್ಲಿ ನಡೆದಿದ್ದು, ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಮಗು ರಕ್ಷಿಸಲ್ಪಟ್ಟಿದೆ. ಗ್ರಾಮದ ಕಸದ ರಾಶಿಯ ಬಳಿ ಮಹಿಳೆಯೊಬ್ಬರು ನವಜಾತ ಶಿಶುವನ್ನು ಬಿಟ್ಟು ಆಟೋದಲ್ಲಿ ತೆರಳಲು ಯತ್ನಿಸುತ್ತಿದ್ದ ವೇಳೆ ಸ್ಥಳೀಯರ ಗಮನಕ್ಕೆ ಬಂದಿದೆ. ಅನುಮಾನಗೊಂಡ ಗ್ರಾಮಸ್ಥರು ಕೂಡಲೇ ಆಟೋವನ್ನು ತಡೆದು ಮಗುವಿನ ರಕ್ಷಣೆ ಮಾಡಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಮಕ್ಕಳ ಸಹಾಯವಾಣಿ ಸಂಯೋಜಕ ಬಸವರಾಜ್ ಅವರು … Continue reading ಹೆತ್ತ ಕಂದಮ್ಮನನ್ನೇ ಕಸದ ರಾಶಿಗೆ ಎಸೆದ ತಾಯಿ: ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಹಸುಗೂಸು ರಕ್ಷಣೆ