Thursday, September 18, 2025

ಪ್ರಧಾನಿ ಮೋದಿ ಅವತಾರ ಪುರುಷ…ಜನ್ಮದಿನಕ್ಕೆ ವಿಶೇಷವಾಗಿ ಶುಭಕೋರಿದ ಮುಕೇಶ್ ಅಂಬಾನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಜನ್ಮದಿನ ಇಂದು ದೇಶ ವಿದೇಶಗಳಿಂದ ಜನರು ಶುಭಾಶಯಗಳನ್ನು ಕೋರಿದ್ದಾರೆ. ಮುಕೇಶ್ ಅಂಬಾನಿ ಅವರು ಮೋದಿಯನ್ನು ಅವತಾರ ಪುರುಷ ಎಂದೂ ಬಣ್ಣಿಸಿದ್ದಾರೆ.

‘ಭಾರತದ ಅಮೃತ ಘಳಿಗೆಯಲ್ಲಿ ನರೇಂದ್ರ ಮೋದಿ ಅವರ ಅಮೃತ ಮಹೋತ್ಸವ ಬಂದಿರುವುದು ಕಾಕತಾಳೀಯ ಅಲ್ಲ. ಭಾರತವನ್ನು ಈ ಭೂಮಿಯ ಸರ್ವಶ್ರೇಷ್ಠ ದೇಶವನ್ನಾಗಿ ಮಾಡಲು ಆ ದೇವರೇ ಮೋದಿಯವರನ್ನು ಅವತಾರ ಪುರುಷರನ್ನಾಗಿ ಮಾಡಿ ಕಳುಹಿಸಿದ್ದಾನೆ. ಅವರ ಜನ್ಮದಿನವನ್ನು ಉತ್ಸವವಾಗಿ ಆಚರಿಸಬೇಕು’ ಎಂದು ಮುಕೇಶ್ ಅಂಬಾನಿ ಹೊಗಳಿದ್ದಾರೆ.

ಮೂರು ದಶಕಗಳಿಗೂ ಹೆಚ್ಚು ಕಾಲ ಅವರೊಂದಿಗೆ ನಿಕಟವಾಗಿರುವುದು ನನ್ನ ಸೌಭಾಗ್ಯ. ದೇಶದ ಏಳ್ಗೆಗಾಗಿ ಇಷ್ಟು ದಣಿವರಿಯದೆ ಕೆಲಸ ಮಾಡಿದ ಇನ್ನೊಬ್ಬ ನಾಯಕನನ್ನು ನಾನು ನೋಡಿಯೇ ಇಲ್ಲ’ ಎಂದೂ ರಿಲಾಯನ್ಸ್ ಇಂಡಸ್ಟ್ರೀಸ್ ಛೇರ್ಮನ್ ಹೇಳಿದ್ದಾರೆ.

ಆನಂದ್ ಮಹೀಂದ್ರ
‘ಭಾರತದ ಬಗ್ಗೆ ನಿಮಗಿರುವ ಪ್ರೀತಿ ಮತ್ತು ದೇಶದ ಘನತೆ ಹೆಚ್ಚಿಸಲು ನಿಮಗಿರುವ ಬದ್ಧತೆ ಬಗ್ಗೆ ಯಾವ ಸಂದೇಹವೂ ಇಲ್ಲ. ನಿಮ್ಮ ಅವಿರತ ಶ್ರಮ ಪ್ರತಿಯೊಬ್ಬ ಭಾರತೀಯನಿಗೂ ಕಾಣುತ್ತಿದೆ’ ಎಂದು ಮಹೀಂದ್ರ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರ ಅಭಿಪ್ರಾಯಪಟ್ಟಿದ್ದಾರೆ.

ಸಂಜೀವ್ ಗೋಯಂಕಾ
‘ನರೇಂದ್ರ ಮೋದಿ ಅವರು ಸದಾ ಕಾಲ ಕೆಲಸ ಮಾಡುತ್ತಲೇ ಇರುತ್ತಾರೆ, ದೇಶದ ಬಗ್ಗೆ ಯೋಚಿಸುತ್ತಲೇ ಇರುತ್ತಾರೆ. ಅಪಾರ ಬುದ್ಧಿಮತ್ತೆ ಮತ್ತು ಅದ್ಭುತ ದೃಷ್ಟಿಕೋನದ ಜೊತೆಗೆ ನಿಸ್ವಾರ್ಥ ಗುಣ ಮೇಳೈಸಿರುವ ವ್ಯಕ್ತಿತ್ವ ಮೋದಿಯವರದ್ದು’ ಎಂದು ಆರ್​ಪಿಜಿ ಗ್ರೂಪ್​ನ ಸಂಜೀವ್ ಗೋಯಂಕಾ ಹೇಳಿದ್ದಾರೆ.

ಇದನ್ನೂ ಓದಿ