ಹೊಸದಿಗಂತ ವರದಿ ಬಳ್ಳಾರಿ:
ಕಾರ್ಮಿಕ ಇಲಾಖೆಯಲ್ಲಿ ಬಹುಕೋಟಿ ಹಗರಣ ನಡೆದಿದ್ದು, ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ದೇವರಾಜ್ ಅವರು ಒತ್ತಾಯಿಸಿದರು.
ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಮಿಕರ ಆರೋಗ್ಯ ತಪಾಸಣೆ ಸಂಚಾರಿ ವಾಹನದಲ್ಲಿ ಬೇಕಾಬಿಟ್ಟಿಯಾಗಿ ಸಂಖ್ಯೆಯನ್ನು ನಮೂದಿಸಿ ಕೋಟ್ಯಂತರ ಹಣ ಲೂಟಿ ಹೊಡೆಯಲಾಗಿದೆ, ಕಟ್ಟಡ ಕಾರ್ಮಿಕರ ಕಿಟ್, ಎಲೆಕ್ಟ್ರೆಶನ್ ಕಿಟ್, ಪ್ಲಂಬರ್ ಕಿಟ್, ಪೆಂಟರ್ ಕಿಟ್ ಖರೀದಿಯಲ್ಲಿ 800ಕ್ಕೂ ಹೆಚ್ಚು ಕೋಟಿ ಹಗರಣ ನಡೆದಿದೆ. ಕಟ್ಟಡ ಕಾರ್ಮಿಕರಿಗೆ ವಿತರಿಸಿದ ಕಿಟ್ ಎಲ್ಲವೂ ಸೇರಿ 1400 ರೂ.ವೆಚ್ವವಾದರೆ, ಅದನ್ನು 5 ರಿಂದ 6ಸಾವಿರ ನಮೂದಿಸಿ ಕೋಟ್ಯಂತರ ರೂ.ಹಣ ಲಪಟಾಯಿಸಲಾಗಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ನೇರವಾಗಿ ಈ ಹಗರಣದಲ್ಲಿ ಭಾಗಿಯಾಗಿರುವ ಶಂಕೆಯಿದೆ, ಕೂಡಲೇ ತನಿಖೆ ನಡೆಸಿ, ಕಾರ್ಮಿಕರ ಹಿತಕಾಪಾಡಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕ ಇಲಾಖೆಯಲ್ಲಿ ಬಹುಕೋಟಿ ಹಗರಣ ಬಯಲು, ತನಿಖೆಗೆ ಕಾರ್ಮಿಕರ ಒಕ್ಕೂಟ ಆಗ್ರಹ

