ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಕ್ರಿಶ್’ ಹಾಗೂ ‘ಕ್ರಿಶ್ 3’ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ನಾಯಕಿ ಆಗಿದ್ದರು. ಈಗ ‘ಕ್ರಿಶ್ 4’ ಚಿತ್ರದಲ್ಲಿ ಪ್ರಿಯಾಂಕಾ ಸ್ಥಾನವನ್ನು ರಶ್ಮಿಕಾ ತುಂಬಲಿದ್ದಾರೆ ಎನ್ನಲಾಗುತ್ತಿದೆ.
‘ಕ್ರಿಶ್ 4’ ಚಿತ್ರದ ಸ್ಕ್ರಿಪ್ಟ್ ಕೆಲಸ ಪ್ರಗತಿಯಲ್ಲಿ ಇದೆ. ಇದರ ಜೊತೆಗೆ ಪಾತ್ರವರ್ಗದ ಆಯ್ಕೆ ಕೂಡ ಫೈನಲ್ ಮಾಡುವ ಕೆಲಸ ಆಗುತ್ತಿದೆ. ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ನಲ್ಲಿ ಸೆಟಲ್ ಆಗಿದ್ದು, ಅವರು ಸದ್ಯಕ್ಕಂತೂ ಹಿಂದಿ ಚಿತ್ರರಂಗಕ್ಕೆ ಮರಳಲ್ಲ. ಹೀಗಾಗಿ, ಬೇರೆ ನಟಿಯರ ಆಯ್ಕೆ ತಂಡಕ್ಕೆ ಅನಿವಾರ್ಯ ಆಗಿದೆ. ಈ ವೇಳೆ ನಿರ್ಮಾಪಕರ ಕಣ್ಣು ರಶ್ಮಿಕಾ ಮಂದಣ್ಣ ಮೇಲೆ ಬಿದ್ದಿದೆ.
ಹೃತಿಕ್ ರೋಷನ್ ಅವರು ‘ಕ್ರಿಶ್ 4’ ಚಿತ್ರದ ಹೀರೋ. ಇವರ ಜೊತೆ ರಶ್ಮಿಕಾ ಮಂದಣ್ಣ ಇನ್ನೂ ತೆರೆ ಹಂಚಿಕೊಂಡಿಲ್ಲ. ಈ ಫ್ರೆಶ್ ಜೋಡಿ ನೋಡಲು ಫ್ಯಾನ್ಸ್ ಕೂಡ ಕಾದಿದ್ದಾರೆ. ಹೀಗಾಗಿ, ಚಿತ್ರತಂಡದವರು ಇದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ವರದಿ ಆಗಿದೆ.