ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಜಿತ್ ಕುಮಾರ್ ಅಭಿಮಾನಿಗಳಿಗೆ ಬೇಸರ ಆಗಿದೆ. ಅವರ ನಟನೆಯ ಗುಡ್ ಬ್ಯಾಡ್ ಅಗ್ಲಿ ಸಿನಿಮಾವನ್ನು ನೆಟ್‌ಫ್ಲಿಕ್ಸ್ ತೆಗೆದುಹಾಕಿದೆ.
ಇದಕ್ಕೆ ಕಾರಣ ಏನು ಗೊತ್ತಾ?
ಕಾಪಿರೈಟ್ ಇಶ್ಯೂ! ಹೌದು, ಕಾಪಿರೈಟ್ ಉಲ್ಲಂಘನೆಯಿಂದ ಒಟಿಟಿ ಪ್ಲಾಟ್ಫಾರ್ಮ್ಗಳಿಗೆ ತೊಂದರೆ ಆಗುತ್ತಿದೆ. ಒಂದು ವೇಳೆ ಕಾಪಿರೈಟ್ ಉಲ್ಲಂಘನೆ ಆಗಿರುವುದು ಕಂಡುಬಂದರೆ ಕಾನೂನಿನ ಪ್ರಕಾರ ಅಂತಹ ಸಿನಿಮಾಗಳ ಪ್ರಸಾರವನ್ನು ನಿಲ್ಲಿಸುವುದು ಅನಿವಾರ್ಯ ಆಗುತ್ತದೆ. ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾದ ಪ್ರಸಾರ ಹಕ್ಕುಗಳನ್ನು ಹೊಂದಿರುವ ನೆಟ್‌ಫ್ಲಿಕ್ಸ್ ಕೂಡ ಈಗ ಕಾನೂನಿಗೆ ತಲೆಬಾಗಿ ಈ ಚಿತ್ರದ ಪ್ರಸಾರವನ್ನು ನಿಲ್ಲಿಸಿದೆ.
‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆಯು ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾವನ್ನು ನಿರ್ಮಾಣ ಮಾಡಿದೆ. ಈ ಚಿತ್ರದಲ್ಲಿ ಇಳೆಯರಾಜ ಅವರ ಹಾಡುಗಳನ್ನು ಅನುಮತಿ ಇಲ್ಲದೇ ಬಳಸಿಕೊಳ್ಳಲಾಗಿದೆ ಎಂಬ ಆರೋಪ ಇದೆ. ಹಾಗಾಗಿ 5 ಕೋಟಿ ರೂಪಾಯಿ ಹಣ ನೀಡಬೇಕು ಮತ್ತು ಕ್ಷಮೆ ಕೇಳಬೇಕು ಎಂದು ಇಳೆಯರಾಜ ಒತ್ತಾಯಿಸಿದ್ದರು. ಬಳಿಕ ಈ ಸಿನಿಮಾ ಮೇಲೆ ಅವರು ಕೇಸ್ ಹಾಕಿದ್ದರು.