Monday, October 27, 2025

CINE | ಹೊಸʼಬೆಳಕುʼ : ಭರ್ಜರಿ ಸೆಲಬ್ರೇಷನ್‌ ಮೋಡ್‌ನಲ್ಲಿ ರಿಷಭ್‌ ಶೆಟ್ಟಿ & ಫ್ಯಾಮಿಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾಂತಾರ ಚಿತ್ರ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಸಾವಿರ ಕೋಟಿ ಕಲೆಕ್ಷನ್ ಗಡಿ ತಲುಪುವ ದಾರಿಯಲ್ಲಿದೆ. ದಸರಾದಿಂದ ದೀಪಾವಳಿವರೆಗೂ ಬಿರುಸಿನ ಪ್ರಚಾರದಲ್ಲಿ ಭಾಗಿಯಾಗಿದ್ದ ರಿಷಬ್ ಶೆಟ್ಟಿ ಹಾಗೂ ಪತ್ನಿ ಪ್ರಗತಿ ಶೆಟ್ಟಿ ಇದೀಗ ವೈಯಕ್ತಿಕ ಸಂಭ್ರಮಕ್ಕೆ ದೀಪಾವಳಿ ಹಬ್ಬದ ದಿನ ಬ್ರೇಕ್ ತೆಗೆದುಕೊಂಡಿದ್ದಾರೆ.

ಕುಂದಾಪುರದ ಕೆರಾಡಿಯ ತಮ್ಮ ನಿವಾಸದಲ್ಲಿ ರಿಷಬ್ ಶೆಟ್ಟಿ ಅದ್ದೂರಿಯಾಗಿ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಕರಾವಳಿ ಭಾಗದಲ್ಲಿ ದೀಪಾವಳಿ ಹಬ್ಬಕ್ಕೆ ಆಯುಧ ಪೂಜೆ ಮಾಡುವ ಪದ್ಧತಿ ಇದೆ. ಅದರಂತೆ ಮನೆಯ ಅಂಗಳದಲ್ಲಿ ಸಾಲು ಸಾಲು ವಾಹನಗಳನ್ನ ಇಟ್ಟು ರಿಷಬ್ ಶೆಟ್ಟಿ ದಂಪತಿ ಪೂಜೆ ಮಾಡಿದ್ದಾರೆ. ತುಳಸಿಕಟ್ಟೆಗೆ ಪೂಜೆ ಸೇರಿದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಮಕ್ಕಳ ಜೊತೆ ಸಮಯ ಕಳೆದಿದ್ದಾರೆ. ಆ ಫೋಟೋಗಳನ್ನ ಇದೀಗ ರಿಷಬ್ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

https://www.instagram.com/p/DQOas_9Exwz/?igsh=MWw3dnMzeWRoN2JnbA%3D%3D

error: Content is protected !!