ಕಬ್ಬು ಬೆಳೆಗಾರರು–ಸಕ್ಕರೆ ಕಾರ್ಖಾನೆಗಳ ನಡುವೆ ಸಂಘರ್ಷ ಬೇಡ: ಸೌಹಾರ್ದಯುತ ಪರಿಹಾರಕ್ಕೆ ಸಿಎಂ ಡಿಕೆಶಿ ಮನವಿ

ಹೊಸದಿಗಂತ ವರದಿ ಬೆಳಗಾವಿ: ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರ ನಡುವಿನ ಸಮಸ್ಯೆಗಳಿಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬೇಕು. ರೈತರನ್ನು ವಿಶ್ವಾಸಕ್ಕೆ ಪಡೆದು, ಎಲ್ಲರೂ ಒಮ್ಮತದ ತೀರ್ಮಾನಕ್ಕೆ ಬರಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು. ಸೋಮವಾರ ಬೆಳಗಾವಿಯಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರೈತರು ಮತ್ತು ಕಾರ್ಖಾನೆಗಳ ಹಿತ ಕಾಯುವುದು ಸರ್ಕಾರದ ಜವಾಬ್ದಾರಿಯಾಗಿದೆ. ಕಾರ್ಖಾನೆಗಳಿಲ್ಲದೆ ರೈತರಿಗೆ, ರೈತರಿಲ್ಲದೆ ಕಾರ್ಖಾನೆಗಳಿಗೆ ಅಸ್ತಿತ್ವವಿಲ್ಲ. ಹೀಗಾಗಿ ಎರಡೂ ಕಡೆಯವರ ಹಿತಾಸಕ್ತಿ ಕಾಪಾಡುವುದು ಮುಖ್ಯ ಎಂದರು. … Continue reading ಕಬ್ಬು ಬೆಳೆಗಾರರು–ಸಕ್ಕರೆ ಕಾರ್ಖಾನೆಗಳ ನಡುವೆ ಸಂಘರ್ಷ ಬೇಡ: ಸೌಹಾರ್ದಯುತ ಪರಿಹಾರಕ್ಕೆ ಸಿಎಂ ಡಿಕೆಶಿ ಮನವಿ