ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವುದೇ ಶಕ್ತಿ ವೀರಶೈವ-ಲಿಂಗಾಯತರನ್ನ ಬೇರ್ಪಡಿಸಲು ಸಾಧ್ಯವಿಲ್ಲ. ʻವೀರಶೈವ ಲಿಂಗಾಯತರು ಹಾಳಾದ್ರೆ ಇಡೀ ರಾಜ್ಯವೇ ಹಾಳಾಗುತ್ತೆ, ಅವರು ಸುಧಾರಿಸಿದ್ರೆ, ಕರ್ನಾಟಕ ಉದ್ಧಾರ ಆಗುತ್ತೆʼ ಅಂತ ಸಾಹಿತಿಯೊಬ್ಬರು ಹೇಳ್ತಾರೆ. ಹಾಗಾಗಿ ಎಲ್ಲರ ಉದ್ಧಾರ ಆಗಬೇಕಾದ್ರೆ, ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿರುವುದು ಅತ್ಯವಶ್ಯಕವಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಪ್ರತ್ಯೇಕ ಲಿಂಗಾಯತ ಧರ್ಮ ಆಗಬೇಕು ಎಂಬ ಸಚಿವ ಎಂ.ಬಿ ಪಾಟೀಲ್ ಹೇಳಿಕೆಗೆ ಪ್ರತಕ್ರಿಯಿಸಿಅವರು. ಎಂ.ಬಿ.ಪಾಟೀಲ್ ನನಗೆ ಸ್ನೇಹಿತರು ಅವರ ಬಗ್ಗೆ ಮಾತನಾಡಲ್ಲ. ಯಾರಿಂದಲೂ ವೀರಶೈವ ಲಿಂಗಾಯತ ಬೇರೆ ಮಾಡಲು ಸಾಧ್ಯವಿಲ್ಲ. ಎಲ್ಲರೂ ಒಗ್ಗಟ್ಟಿನಿಂದಲೇ ಇದೀವಿ. ಅಲ್ಲದೇ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಸಿದ್ದರಾಮಯ್ಯ ಹೆಸರನ್ನ ತಳಕು ಹಾಕಬಾರದು ಎಂದು ಹೇಳಿದ್ದಾರೆ.