ಹೊಸದಿಗಂತ ಡಿಜಿಟಲ್ ಡೆಸ್ಕ್:
ನವರಾತ್ರಿ ಹಬ್ಬದ ಸಮಯ ಹಿಂದುಗಳುವೃತ ಕೈಗೊಳ್ಳುತ್ತಾರೆ. ಹಲವರು ಕನಿಷ್ಠ ಮಾಂಸಾಹಾರ ತ್ಯಜಿಸುತ್ತಾರೆ .ಕೆಲವು ಹಿಂದು ಸಂಘಟನೆಗಳು ನವರಾತ್ರಿ ಹಬ್ಬದ ವೇಳೆ ಮಾಂಸಾಹಾರ ಮಾರಾಟ ಬ್ಯಾನ್ ಮಾಡುವಂತೆ ಆಗ್ರಹಿಸಿದ್ದಾರೆ.
ಇತ್ತ ಕಾಂಗ್ರೆಸ್ ನಾಯಕ ಉದಿತ್ ರಾಜ್ , ಯಾರೋ ಹೇಳಿದರೂ ಎಂದು ಹಿಂದುಗಳು ಮಾಂಸಾಹಾರ ಬಿಡ್ತೀರಾ? ನವರಾತ್ರಿ ವೇಳೆ ಹಲವು ಹಿಂದುಗಳು ಮಾಂಸಾರಾ ಸೇವನೆ ಮಾಡುತ್ತಾರೆ. ನವರಾತ್ರಿ ವೇಳೆ ಮಾಂಸಾಹಾರ ನಿಷೇಧ ಸರಿಯಲ್ಲ ಎಂದು ಹೇಳಿದ್ದಾರೆ.
ನವರಾತ್ರಿ ಹಬ್ಬಕ್ಕೆ ಮಾಂಸಹಾರ ನಿಷೇಧ ಮಾಡುವ ಅಗ್ರಹವೇ ಅಸಂವಿಧಾನಿಕ. ಯಾರಿಗೂ ಮಾಂಸಾಹಾರ ಬ್ಯಾನ್ ಮಾಡುವ ಅಧಿಕಾರವಿಲ್ಲ. ಯಾರ ಯಾವ ಆಹಾರ ತಿನ್ನಬೇಕು ಎಂದು ಮುಖಂಡರು ಅಥವಾ ಇನ್ಯಾರೋ ಹೇಳುವುದಲ್ಲ. ನವರಾತ್ರಿ ವೇಳೆ ಹಲವು ಹಿಂದುಗಳು ಮಾಂಸಾಹಾರ ಸೇವಿಸುತ್ತಾರೆ. ಹಲವು ದೇವಸ್ಥಾನ, ಗುಡಿಗಳಲ್ಲಿ ಪ್ರಾಣಿ ಬಲಿಗಳು ನಡೆಯುತ್ತದೆ. ಪ್ರಮುಖವಾಗಿ ಕಾಳಿ ಮಾತೆಗೆ ಮಾಂಸಾಹಾರ ಪ್ರಸಾದ ನೀಡುವ ಪದ್ಧತಿಗೆಳು ಕೆಲವೆಡೆ ಇದೆ. ಹೀಗಾಗಿ ಮಾಂಸಾಹಾರ ಬ್ಯಾನ್ ಆಗ್ರಹವೇ ತಪ್ಪು ಎಂದು ಉದಿತ್ ರಾಜ್ ಹೇಳಿದ್ದಾರೆ.
ಯಾರೋ ಹೇಳಿದರು ಎಂದು ಮಾಂಸಾಹಾರ ಬ್ಯಾನ್ ಮಾಡಲು ಸಾಧ್ಯವಿಲ್ಲ. ಸರ್ಕಾರಕ್ಕೆ, ಸ್ಥಳೀಯ ಆಡಳಿತಕ್ಕೆ ಮಾತ್ರ ಈ ಅಧಿಕಾರವಿದೆ. ಆರ್ಟಿಕಲ್ 19ರ ಪ್ರಕಾರ ನಾಗರೀಕರಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಯಾರೂ ನಾಗರೀಕರ ಮೇಲೆ ಯಾವ ಆಹಾರ ತಿನ್ನಬೇಕು, ಬೇಡ ಎಂದು ಹೇರಲು ಸಾಧ್ಯವಿಲ್ಲ ಎಂದು ಉದಿತ್ ರಾಜ್ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಉದಿತ್ ರಾಜ್ ಹೇಳಿಕೆಗೆ ಪರ ವಿರೋಧಗಳು ವ್ಯಕ್ತವಾಗಿದೆ. ಕೆಲವರು ನವರಾತ್ರಿ ಸಮಯದಲ್ಲಿ ಮಾಂಸಾಹಾರ ನಿಷೇಧ ಸರಿಯಲ್ಲ ಎಂದಿದ್ದಾರೆ. ಇದೇ ವೇಳೆ ಹಿಂದುಗಳ ನಂಬಿಕೆ ಹಾಗೂ ಭಾವನೆಗಳ ಜೊತೆ ಚೆಲ್ಲಾಟವಾಡುವುದು ಸರಿಯಲ್ಲ. ನಮ್ಮ ಪವಿತ್ರ ಹಬ್ಬದ ವೇಳೆ ಮಾಂಸಾಹರ ನಿಷೇಧ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.