ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್ ನಟ ಪವನ್ ಕಲ್ಯಾಣ್ ಅಭಿನಯದ ‘ಓಜಿ’ ಸಿನಿಮಾ ಬಿಡುಗಡೆ ಮಾಡಲಾಗಿದೆ.
ಈ ಮೊದಲು ಟ್ರೇಲರ್ ಬಿಡುಗಡೆ ವಿಚಾರದಲ್ಲಿ ಚಿತ್ರತಂಡದಿಂದ ನಿರಾಸೆ ಉಂಟಾಗಿತ್ತು. ಅಂದುಕೊಂಡ ಸಮಯದಲ್ಲಿ ‘ಓಜಿ’ ಟ್ರೇಲರ್ ಬಿಡುಗಡೆ ಆಗಲಿಲ್ಲ. ಕಾದು ಕಾದು ಸುಸ್ತಾದ ಅಭಿಮಾನಿಗಳು ನಿರಾಸೆಗೊಂಡಿದ್ದರು. ಇದೀಗ ಇಂದು (ಸೆಪ್ಟೆಂಬರ್ 22) ಮಧ್ಯಾಹ್ನ ‘ಓಜಿ’ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಇದನ್ನು ನೋಡಿದ ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಖುಷಿ ಆಗಿದೆ.
‘ದೇ ಕಾಲ್ ಹಿಮ್ ಓಜಿ’ ಎಂಬುದು ಈ ಸಿನಿಮಾದ ಪೂರ್ಣ ಶೀರ್ಷಿಕೆ. ಸುಜೀತ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಡಿವಿವಿ ದಾನಯ್ಯ ಅವರು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ‘ಓಜಿ’ ಸಿನಿಮಾದ ಟ್ರೇಲರ್ನಲ್ಲಿ ಅದ್ದೂರಿತನ ಕಾಣಿಸಿದೆ.
https://www.youtube.com/watch?v=_8J8LwoVH_0
‘ಓಜಿ’ ಸಿನಿಮಾದಲ್ಲಿ ದೊಡ್ಡ ತಾರಾಗಣ ಇದೆ. ಬಾಲಿವುಡ್ ನಟ ಇಮ್ರಾನ್ ಹಷ್ಮಿ ಅವರು ವಿಲನ್ ಆಗಿ ನಟಿಸಿದ್ದಾರೆ. ಪ್ರಿಯಾಂಕಾ ಮೋಹನ್, ಅರ್ಜುನ್ ದಾಸ್, ಪ್ರಕಾಶ್ ರಾಜ್, ರಾವ್ ರಮೇಶ್ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ. ಥಮನ್ ಎಸ್. ಅವರು ಸಂಗೀತ ನೀಡಿದ್ದಾರೆ. ಸೆಪ್ಟೆಂಬರ್ 25ರಂದು ‘ಓಜಿ’ ಸಿನಿಮಾ ದೇಶಾದ್ಯಂತ ಬಿಡುಗಡೆ ಆಗಲಿದೆ.
ಕೆಲವೇ ಗಂಟೆಗಳಲ್ಲಿ 30 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಗ್ಯಾಂಗ್ ವಾರ್ ಕಹಾನಿ ಈ ಸಿನಿಮಾದಲ್ಲಿ ಇರಲಿದೆ. ಪವನ್ ಕುಮಾರ್ ಅವರು ಆ್ಯಕ್ಷನ್ ಹೀರೋ ಅವತಾರ ತಾಳಿದ್ದಾರೆ. ‘ಓಜಿ’ ನೋಡಲು ಚಿತ್ರಮಂದಿರಕ್ಕೆ ಹೋಗುವ ಪ್ರೇಕ್ಷಕರಿಗೆ ಆ್ಯಕ್ಷನ್ ಟ್ರೀಟ್ ಸಿಗಲಿದೆ. ಟ್ರೇಲರ್ನಲ್ಲಿ ಆ್ಯಕ್ಷನ್ ದೃಶ್ಯಗಳು ಹೈಲೈಟ್ ಆಗಿವೆ.