ಹೊಸದಿಗಂತ ವರದಿ ಕಲಬುರಗಿ:
ಕರ್ತವ್ಯನಿರತ ಪೋಲಿಸ್ ಸಿಬ್ಬಂದಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದಲ್ಲಿ ನಡೆದಿದೆ.
ಮನೋಹರ್ ಪವಾರ್ ((೪೬) ಹೃದಯಾಘಾತದಿಂದ ಸಾವನ್ನಪ್ಪಿರುವ ಸಿಬ್ಬಂದಿಯಾಗಿದ್ದು,ಮಳಖೇಡ ಪೋಲಿಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.ನಿನ್ನೆ ೯ ದಿನಗಳ ಗಣೇಶ್ ವಿಸರ್ಜನೆ ವೇಳೆ ಕರ್ತವ್ಯಕ್ಕಾಗಿ ತೆರಳಿದ್ದರು.
ಗಣೇಶ್ ವಿಸರ್ಜನೆ ವೇಳೆ ಕರ್ತವ್ಯನಿರತರಾಗಿದ್ದ ವೇಳೆ ಹೃದಯಾಘಾತ ಸಂಭವಿಸಿದೆ. ಆಂಬುಲೆನ್ಸ್ ನಲ್ಲಿ ಕಲಬುರಗಿ ಆಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ.