ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಚಿತ್ರರಂಗದಲ್ಲಿ ಅಕ್ಟೋಬರ್ 17ರಂದು ಬಿಡುಗಡೆಯಾದ ಡ್ಯೂಡ್ (Dude) ಸಿನಿಮಾ ಈಗ ಸಖತ್ ಚರ್ಚೆಯ ವಿಷಯವಾಗಿದೆ. ಕೇವಲ 35 ಕೋಟಿ ರೂಪಾಯಿ ಬಜೆಟ್‌ನಲ್ಲೇ ನಿರ್ಮಿತವಾಗಿದ್ದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅದ್ದೂರಿ ಯಶಸ್ಸು ಕಂಡು, 100 ಕೋಟಿ ಕ್ಲಬ್‌ಗೆ ಸೇರ್ಪಡೆಯಾಗಿದೆ. ಬಿಡುಗಡೆಯಾದ ಕೆಲವೇ ವಾರಗಳಲ್ಲಿ ಪ್ರೇಕ್ಷಕರ ಮನಗೆದ್ದಿರುವ ಈ ಸಿನಿಮಾ ಇದೀಗ ಓಟಿಟಿ ಪ್ಲಾಟ್‌ಫಾರ್ಮ್‌ನತ್ತ ಪಯಣ ಮಾಡುತ್ತಿದೆ.
ಬಾಕ್ಸ್ ಆಫೀಸ್‌ನಲ್ಲಿ ಧಮಾಕಾ ಮಾಡಿದ ಈ ಡ್ಯೂಡ್ ಸಿನಿಮಾ ರೋಮ್ಯಾಂಟಿಕ್ ಕಾಮಿಡಿ ಶೈಲಿಯ ಮನರಂಜನೆಯ ಚಿತ್ರವಾಗಿದ್ದು, ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಗಳಿಸಿದೆ. ಜನರ ಮನದಲ್ಲಿ ಸದ್ದು ಮಾಡಿರುವ ಈ ಸಿನಿಮಾ ನವೆಂಬರ್ 14ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದ್ದು, ಓಟಿಟಿ ಪ್ರೇಕ್ಷಕರಿಗೂ ಸಿನಿಮಾ ವೀಕ್ಷಣೆಯ ಅವಕಾಶ ಸಿಗಲಿದೆ.
ಚಿತ್ರದಲ್ಲಿ ಪ್ರದೀಪ್ ರಂಗನಾಥನ್ ಅವರು ಅಗನ್ ಚಿದಂಬರಂ ಪಾತ್ರದಲ್ಲಿ ಮಿಂಚಿದ್ದು, ನಟಿ ಮಮಿತಾ ಬೈಜು ಅವರು ಕುರಲ್ ಅತಿಯಾಮಾನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರವನ್ನು ಕೀರ್ತಿಶ್ವರನ್ ನಿರ್ದೇಶಿಸಿದ್ದು, ಸಂಗೀತ ಸಂಯೋಜನೆಗೆ ಸಾಯಿ ಅಭಯಂಕರ್ ಹಾಗೂ ಕ್ಯಾಮರಾ ಕೆಲಸಕ್ಕೆ ನಿಕೇತ್ ಬೊಮ್ಮಿ ಹೊಣೆವಹಿಸಿದ್ದಾರೆ.
“ಡ್ಯೂಡ್” ಸಿನಿಮಾವನ್ನು Gen Z ಪೀಳಿಗೆಯ ಕಥೆಯಂತೆ ಚಿತ್ರಿಸಲಾಗಿದೆ. ಯುವ ಪೀಳಿಗೆಯ ಯೋಚನೆ, ಪ್ರೀತಿ ಮತ್ತು ಮದುವೆ ಕುರಿತು ಅವರ ದೃಷ್ಟಿಕೋನವನ್ನು ಹಾಸ್ಯ ಹಾಗೂ ಸಂವೇದನಾಶೀಲ ರೀತಿಯಲ್ಲಿ ತೋರಿಸಲಾಗಿದೆ. ಅದೇ ಕಾರಣಕ್ಕೆ ಯುವ ಪ್ರೇಕ್ಷಕರು ಈ ಚಿತ್ರವನ್ನು ತೀವ್ರವಾಗಿ ಮೆಚ್ಚಿಕೊಂಡಿದ್ದಾರೆ.

