ಆಪರೇಷನ್ ಸಿಂದೂರ: ಯಾವುದೇ ದೇಶ ಪಾಕಿಸ್ತಾನವನ್ನು ದೂಷಿಸಿಲ್ಲ! ಪಾಕ್ ಪರ ನಾಲಗೆ ಹರಿಬಿಟ್ಟ ಮಣಿಶಂಕರ್ ಅಯ್ಯರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಪರೇಷನ್ ಸಿಂದೂರ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ನೀಡಿರುವ ಹೊಸ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಪಹಲ್ಗಾಮ್ ದಾಳಿ ಬಳಿಕ ಕೇಂದ್ರ ಸರ್ಕಾರ 33 ದೇಶಗಳಿಗೆ ನಿಯೋಗ ರವಾನಿಸಿದ್ದರೂ, ಯಾವುದೇ ದೇಶವೂ ಪಾಕಿಸ್ತಾನವನ್ನು ನೇರವಾಗಿ ಖಂಡಿಸಿಲ್ಲ ಎಂದು ಅವರು ಹೇಳಿದ್ದಾರೆ. ಇಂತಹ ಹೇಳಿಕೆಗಳಿಂದ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀಳಾಗಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ..

ಅಯ್ಯರ್ ಅವರ ಪ್ರಕಾರ, ಪಾಕಿಸ್ತಾನದ ಬೆಂಬಲದ ಕುರಿತು ಭಾರತದಲ್ಲಿ ಸಾಕಷ್ಟು ಆರೋಪಗಳು ಕೇಳಿಬಂದರೂ, ಜಾಗತಿಕ ಮಟ್ಟದಲ್ಲಿ ಇದಕ್ಕೆ ಬೆಂಬಲ ಸಿಕ್ಕಿಲ್ಲ. ನಿಯೋಗದ ಸದಸ್ಯರಾಗಿ ಶಶಿ ತರೂರ್ ಸೇರಿದಂತೆ ಇತರ ಸಂಸದರು ಈ ದೇಶಗಳಿಗೆ ಭೇಟಿ ನೀಡಿದರೂ, ಇಸ್ರೇಲ್ ಹೊರತುಪಡಿಸಿ ಪಾಕಿಸ್ತಾನವನ್ನೇ ಖಂಡಿಸಿದ ದೇಶಗಳಿಲ್ಲ ಎಂದು ಅಯ್ಯರ್ ಉಲ್ಲೇಖಿಸಿದ್ದಾರೆ. ಅವರು ಈ ನಿಯೋಗದಲ್ಲಿ ತರೂರ್ ಅವರನ್ನು ಸೇರಿಸಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಉದ್ದೇಶವನ್ನೇ ಪ್ರಶ್ನಿಸಿದ್ದಾರೆ.

ಅಯ್ಯರ್ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, “ಸೇನೆಯ ಶೌರ್ಯವನ್ನು ಪ್ರಶ್ನಿಸುವ ಬದಲು ಕಾಂಗ್ರೆಸ್ ಅದಕ್ಕೆ ನಮಸ್ಕಾರ ಮಾಡಬೇಕಿತ್ತು,” ಎಂದು ಹೇಳಿದ್ದಾರೆ. ಸೇನೆಯ ತ್ಯಾಗ ಮತ್ತು ಕಾರ್ಯತತ್ಪರತೆಯ ಬಗ್ಗೆ ಯಾವುದೇ ಅನುಮಾನವಿಲ್ಲವೆಯೆಂಬುದನ್ನು ಅವರು ಪುನರುಚ್ಚರಿಸಿದ್ದಾರೆ.

ಈ ಹಿಂದೆ ಕೂಡ ಪಾಕಿಸ್ತಾನದ ನೆಲದಿಂದ ಭಾರತೀಯ ಸರ್ಕಾರವನ್ನು ಟೀಕಿಸಿದ್ದ ಅಯ್ಯರ್, ಮತ್ತೆ ವಿವಾದದ ಹೊರೆ ಹೊತ್ತಿದ್ದಾರೆ. ಇದೀಗ ಈ ಹೇಳಿಕೆಗಳು ಮುನ್ನೆಡೆಯ ರಾಜಕೀಯ ಚರ್ಚೆಗೆ ಗೆರೆಹಾಕಿದ್ದು, ಶೀಘ್ರದಲ್ಲೇ ಈ ಕುರಿತಂತೆ ಸಂಸತ್ತಿನಲ್ಲಿ ಗಂಭೀರ ಪ್ರತಿಕ್ರಿಯೆಗಳ ನಿರೀಕ್ಷೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!