Thursday, September 4, 2025

‘Greater Bengaluru Authority’ ಹೆಸರಿಗೆ ವಿರೋಧ! ಕನ್ನಡದ ಹೆಸರಿಡುವಂತೆ ಆಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಂಬ ಹೆಸರಿಗೆ ಕನ್ನಡ ಪರ ಹೋರಾಟ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಕನ್ನಡದ ಹೆಸರಿಡುವಂತೆ ಆಗ್ರಹಿಸಿವೆ.

ಮುಂಬೈ ಮತ್ತು ಚೆನ್ನೈನಂತಹ ಪುರಸಭೆಗಳು ತಮ್ಮ ರಾಜ್ಯದ ಅಧಿಕೃತ ಮತ್ತು ಪ್ರಾದೇಶಿಕ ಭಾಷೆಗೆ ಆದ್ಯತೆ ನೀಡಿವೆ. ಮುಂಬೈ ನಾಗರಿಕ ಸಂಸ್ಥೆಯನ್ನು ಬೃಹನ್ಮುಂಬೈ ಮಹಾನಗರ ಪಾಲಿಕೆ ಎಂದು ಹೆಸರಿಸಲಾಗಿದೆ. ಅದೇ ರೀತಿ ಚೆನ್ನೈನ ನಾಗರಿಕ ಸಂಸ್ಥೆಯನ್ನು ‘ಪೆರುನಗರ ಚೆನ್ನೈ ಮಾನಾಗ್-ಆರಾಚಿ’ ಎಂದು ಹೆಸರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಕನ್ನಡ ಹೆಸರಿಡುವಂತ ಕನ್ನಡ ಸಂಘಟನೆಗಳು ಆಗ್ರಹಿಸಿವೆ.

ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ (ಕೆಡಿಎ) ಅಧ್ಯಕ್ಷ ಪುರುಷೋತ್ತಮ್ ಬಿಳಿಮಲೆ ಅವರು ಪತ್ರ ಬರೆದಿದ್ದು, ಕನ್ನಡ ಹೆಸರಿಡುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರು ಹೇಳಿದ್ದರೂ, ಇಲ್ಲಿಯವರೆಗೆ ಕನ್ನಡ ಹೆಸರಿನ ಯಾವುದೇ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೆಲವು ಪ್ರದೇಶಗಳಲ್ಲಿ ಕನ್ನಡೇತರರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಐದು ನಿಗಮಗಳಲ್ಲಿ ಮೇಯರ್ ಮತ್ತು ಉಪ ಮೇಯರ್ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡುವಂತೆ ಕೋರಿ ಈ ಹಿಂದೆ ಕೆಡಿಎ ಸರ್ಕಾರಕ್ಕೆ ಪತ್ರ ಬರೆದಿತ್ತು,

ಇದನ್ನೂ ಓದಿ