ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ಜನಗಣತಿಗಾಗಿ ದಸರಾ ರಜೆಯನ್ನು ಇನ್ನೂ ಹತ್ತು ದಿನ ವಿಸ್ತರಣೆ ಮಾಡಲಾಗಿದೆ. ಇದೇ ತಿಂಗಳ 18ರಿಂದ ಮಕ್ಕಳಿಗೆ ಶಾಲೆ ಆರಂಭವಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ (ಸರ್ಕಾರಿ ಮತ್ತು ಅನುದಾನಿತ ಶಾಲೆಗಳು) ದಸರಾ ರಜೆಯನ್ನು ಅಕ್ಟೋಬರ್ 18ರವರೆಗೆ ವಿಸ್ತರಿಸಿ ಘೋಷಿಸಿದ್ದಾರೆ. ನಾಳೆಯಿಂದ ಆರಂಭವಾಗಬೇಕಿದ್ದ ಶಾಲೆಗಳು ಇನ್ನೂ ಹತ್ತು ದಿನ ತಡವಾಗಿ ಆರಂಭವಾಗಲಿದೆ.
ಇದೀಗ ಎಲ್ಲ ಶಾಲಾ ಮಕ್ಕಳಿಗೂ ರಜೆ ಇಲ್ಲ ಎನ್ನೋದನ್ನು ಗಮನಿಸಬೇಕಿದೆ. ಬರೀ ಸರ್ಕಾರಿ ಶಾಲೆಯ ಮಕ್ಕಳಿಗೆ ಮಾತ್ರ ರಜೆ ವಿಸ್ತರಣೆ ಆಗಿದೆ. ಹೆಚ್ಚಿನ ಶಾಲೆಗಳಲ್ಲಿ ನಾಳೆಯಿಂದ ತರಗತಿ ತೆರೆಯಲಿದೆ.
ಶಾಲಾ ಮಕ್ಕಳಿಗೆ ಸರ್ಕಾರದಿಂದ ವಿಸ್ತರಣೆಯಾಗಿರುವ ದಸರಾ ರಜೆ ಖಾಸಗಿ ಮತ್ತು ಅನುದಾನ ರಹಿತ ಶಾಲೆಗಳಿಗೆ ಈ ರಜೆ ಅನ್ವಯವಾಗುವುದಿಲ್ಲ. ಈ ನಿರ್ಧಾರ ಕೇವಲ ಸರ್ಕಾರಿ ಶಾಲೆ ಮತ್ತು ಅನುದಾನಿತ ಶಾಲೆಗಳಿಗೆ ಮಾತ್ರ ಅನ್ವಯವಾಗಲಿದೆ.
ಪೋಷಕರೇ ಗಮನಿಸಿ, ಎಲ್ಲ ಶಾಲೆ ಮಕ್ಕಳಿಗೂ ದಸರಾ ರಜೆ ವಿಸ್ತರಣೆ ಆಗಿಲ್ಲ!
