Monday, October 6, 2025

ವಿದೇಶಗಳಿಂದಲೂ ದಸರಾ ನೋಡೋಕೆ ಬಂದ ಜನ! ಈವರೆಗೆ ಅಂದಾಜು 100 ಕೋಟಿ ವ್ಯವಹಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಾಳೆ ಐತಿಹಾಸಿಕ ದಸರಾ ಉತ್ಸವ ನಡೆಯಲಿದೆ. ಸಾಂಸ್ಕೃತಿಕ ನಗರಿ ಮೈಸೂರು ಕೆಲದಿನಗಳಿಂದಲೇ ವಿದ್ಯುತ್‌ ದೀಪಗಳಿಂದ ಅಲಂಕೃತವಾಗಿದೆ.

ಈ ಅದ್ಭುತವನ್ನು ಕಣ್ತುಂಬಿಕೊಳ್ಳಲು ವಿದೇಶಗಳಿಂದಲೂ ಜನ ಮೈಸೂರಿಗೆ ಬಂದಿದ್ದಾರೆ. ಇದರಿಂದಾಗಿ ಈವರೆಗೂ ಅಂದಾಜು 100 ಕೋಟಿ ವ್ಯವಹಾರ ಮಾಡಲಾಗಿದೆ.

ನವರಾತ್ರಿ ಆಚರಣೆ ಹಿನ್ನೆಲೆಯಲ್ಲಿ ಕಳೆದ ವರ್ಷ 8 ದಿನದಲ್ಲಿ 4 ಲಕ್ಷ ಜನರು ಮೈಸೂರಿಗೆ ಭೇಟಿ ನೀಡಿದ್ದರು. ಆದರೆ ಈ ಬಾರಿ ನಾಡಹಬ್ಬ ದಸರಾ 11 ದಿನಗಳ ಕಾಲ ನಡೆಯುತ್ತಿದ್ದು, 8 ದಿನಕ್ಕೆ ಸುಮಾರು 5 ಲಕ್ಷ ಜನರು ಮೈಸೂರಿಗೆ ಭೇಟಿ ನೀಡಿದ್ದಾರೆ. ಸರಾಸರಿಯಂತೆ ಪ್ರತಿದಿನ 60 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಮೈಸೂರಿಗೆ ಬರ್ತಿದ್ದಾರೆ. ಇನ್ನುಳಿದ ಮೂರು ದಿನಗಳ ಕಾಲ ಮತ್ತಷ್ಟು ಜನಸಂದಣಿ ಏರಿಕೆ ಆಗುವ ನಿರೀಕ್ಷೆಯಿದೆ.

ದಸರಾ ರಾಜ್ಯ, ಅಂತಾರಾಜ್ಯ ಪ್ರವಾಸಿಗರನ್ನು ಸೆಳೆಯಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಮಾಡಿದ್ದು, ಅಂತಾರಾಜ್ಯ ವಾಹನಗಳಿಗೆ ತೆರಿಗೆ ವಿನಾಯ್ತಿ ಘೋಷಣೆ ಮಾಡಲಾಗಿದೆ. ಹೀಗಾಗಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದ್ದು, ಮೈಸೂರಿನ ಎಲ್ಲಾ ಹೋಟೆಲ್‌ಗಳು ಗಿಜಿಗುಡುತ್ತಿವೆ. ಎಲ್ಲಾ ರೀತಿಯ ಹೋಟೆಲ್‌ಗಳಲ್ಲಿ 10,500 ಕೊಠಡಿಗಳಿದ್ದು, ಎಲ್ಲವೂ ಭರ್ತಿಯಾಗಿ ಬಂಪರ್‌ ಬ್ಯುಸಿನೆಸ್‌ ನಡೀತಿದೆ. ಇದುವೆಗೆ 100 ಕೋಟಿ ವ್ಯವಹಾರ ಆಗಿದೆ ಎಂದು ಅಂದಾಜಿಸಲಾಗಿದೆ.