Tuesday, October 21, 2025

ಕಾವೇರಿ ಆರತಿಗೆ ಪ್ರತಿ ದಿನ ಒಂದೊಂದು ತಾಲೂಕಿನ ಜನರಿಗೆ ಆಹ್ವಾನ: ಚೆಲುವನಾರಾಯಣಸ್ವಾಮಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಶುಕ್ರವಾರದಿಂದ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಪ್ರಾರಂಭ ಆಗಲಿದ್ದು, ಎಲ್ಲಾ ಸಿದ್ದತೆಗಳು ಮುಗಿದಿವೆ. 5 ದಿನಗಳ ಕಾಲ ಕಾವೇರಿ ಅರತಿ ನಡೆಯಲಿದೆ ಎಂದು ಸಚಿವ ಚೆಲುವರಾಯಸ್ವಾಮಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ‌ಪ್ರತಿಕ್ರಿಯೆ ನೀಡಿದ ಅವರು, ಕಾವೇರಿ ಆರತಿಗೆ ಸದ್ಯ ಶಾಶ್ವತ ವ್ಯವಸ್ಥೆ ಮಾಡಿಲ್ಲ. ಇರೋ ಜಾಗದಲ್ಲಿ ಕಾವೇರಿ ಆರತಿ ನಾಳೆಯಿಂದ ಪ್ರಾರಂಭ ಮಾಡ್ತಿದ್ದೇವೆ. ನಾಳೆ ಡಿಸಿಎಂ ಚಾಲನೆ ಕೊಡ್ತಾರೆ. ಶಾಶ್ವತವಾಗಿ ಜಾಗ ಗುರುತು ಮಾಡಿಲ್ಲ. ಕೋರ್ಟ್‌ನಲ್ಲಿ ಕೇಸ್ ಇದೆ. ಅದು ಮುಗಿದ ಮೇಲೆ ಶಾಶ್ವತ ವ್ಯವಸ್ಥೆ ಮಾಡುತ್ತೇವೆ. ಈಗ ಇರುವ ಉತ್ತಮ ಜಾಗದಲ್ಲಿ ಮಾಡಿದ್ದೇವೆ ಎಂದರು.

ನಿತ್ಯ ಒಂದೊಂದು ತಾಲೂಕು ಜನರಿಗೆ ಬರೋದಕ್ಕೆ ಹೇಳಿದ್ದೇವೆ. ನಾಳೆ 3 ತಾಲೂಕು ಜನರಿಗೆ ಆಹ್ವಾನ ನೀಡಲಾಗಿದೆ. ನಾವು ಹಿಂದುತ್ವ ವಿರೋಧ ಅಲ್ಲ. ಧಾರ್ಮಿಕ ವಿಚಾರಕ್ಕೂ ನಾವು ವಿರೋಧ ಮಾಡಿಲ್ಲ. ಚಪಲಕ್ಕೆ ಕೆಲವರು ಮಾತಾಡ್ತಾರೆ ಮಾತಾಡಲಿ ಎಂದು ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದರು. 

error: Content is protected !!