ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮ್‌ಚರಣ್ ನಟನೆಯ ಪೆಡ್ಡಿ ಚಿತ್ರದ ನಿರ್ಮಾಪಕರು ಹೊಸ ಪಾತ್ರದ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದು, ಚಿತ್ರದ ಪ್ರಮುಖ ಪಾತ್ರಗಳಲ್ಲಿ ಒಂದನ್ನು ಗಮನಕ್ಕೆ ತಂದಿದ್ದಾರೆ.
ಇದರ ಬೆನ್ನಲ್ಲೇ ಹೊಸ ವಿಡಿಯೋವೊಂದು ವೈರಲ್ ಆಗಿದೆ. ಪಾಪರಾಜಿಗಳು ರಾಮ್ ಚರಣ್ ಲುಕ್ ನೋಡಿ ಅವರನ್ನು ಅನೇಕರು ಯಶ್ ಎಂದು ಭಾವಿಸಿದ್ದಾರೆ.
ಯಶ್ ಹಾಗೂ ರಾಮ್ ಚರಣ್ ಮಧ್ಯೆ ಹೋಲಿಕೆ ಕಂಡು ಬಂದಿದೆ. ರಾಮ್ ಚರಣ್ ಉದ್ದನೆಯ ಗಡ್ಡ ಹಾಗೂ ಕೂದಲು ಬಿಟ್ಟಿದ್ದಾರೆ. ರಾಮ್ ಚರಣ್ ಅವರನ್ನು ಕೆಲವರು ಯಶ್ ಎಂದು ಕಮೆಂಟ್ ಕೂಡ ಮಾಡಿದ್ದಾರೆ.
ತಮ್ಮ ಕಾರಿನಲ್ಲಿ ಚರಣ್ ಕುಳಿತಿದ್ದನ್ನು ಕಂಡು ಅಲ್ಲಿದ್ದ ಕ್ಯಾಮರಾಮನ್‌ಗಳು ಹಾಗೂ ಕೆಲವರು ಯಶ್ ಎಂದು ಭಾವಿಸಿ ಆ ಕಾರನ್ನು ಆವರಿಸಿಕೊಂಡಿದ್ದಾರೆ ರಾಮ್‌ಚರಣ್ ತುಸು ಮುಜುಗರಕ್ಕೀಡಾದರೂ ನಗುತ್ತಲೇ ಎಲ್ಲರತ್ತ ಕೈಬೀಸಿದ್ದಾರೆ.

