ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದಲ್ಲಿ ಬಹು ನಿರೀಕ್ಷೆ ಹುಟ್ಟಿಸಿದ್ದ ‘ಡೆವಿಲ್’ ಸಿನಿಮಾ ತೆರೆಗೆ ಬಂದ ಕೂಡಲೇ ಪ್ರೇಕ್ಷಕರ ಗಮನ ಸೆಳೆದು ಭರ್ಜರಿ ಪ್ರಾರಂಭ ದಾಖಲಿಸಿದೆ. ದರ್ಶನ್ ಮತ್ತು ರಚನಾ ರೈ ಅಭಿನಯದ ಈ ಚಿತ್ರ ರಾಜ್ಯದಾದ್ಯಂತ 500 ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ಮೊದಲ ದಿನವೇ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಧನುಷ್-ಕೃಷ್ಣನ ಪಾತ್ರದಲ್ಲಿ ದರ್ಶನ್ ನೀಡಿರುವ ತೀವ್ರ ಅಭಿನಯ ಅಭಿಮಾನಿಗಳ ಹೃದಯ ಗೆದ್ದಿದೆ.
ಚಿತ್ರದ ಯಶಸ್ಸಿನ ನಡುವೆ ಪೈರಸಿ ಬೆದರಿಕೆ ಮತ್ತೆ ತಲೆದೋರಿರುವ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ದರ್ಶನ್ ಮಹತ್ವದ ಸಂದೇಶ ನೀಡಿದ್ದಾರೆ. ಪೈರಸಿ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ‘ಪೈರಸಿಗೆ ನೋ ಹೇಳಿ’ ಎಂದು ಬರೆದಿರುವ ಒಫಿಷಿಯಲ್ ಪೋಸ್ಟರ್ ಅನ್ನು ಹಂಚಿಕೊಂಡು, ಪೈರೇಟೆಡ್ ಲಿಂಕ್‌ಗಳನ್ನು ನೇರವಾಗಿ ವರದಿ ಮಾಡಲು ವಿಶೇಷ ವಾಟ್ಸಾಪ್ ಸಂಖ್ಯೆಯನ್ನೂ ಸಾರ್ವಜನಿಕರ ಗಮನಕ್ಕೆ ತಂದಿದ್ದಾರೆ.
ಮೊದಲ ದಿನದ ಕಲೆಕ್ಷನ್ ಕುರಿತು ಬಂದಿರುವ ಅಂದಾಜಿನ ಪ್ರಕಾರ, ‘ಡೆವಿಲ್’ ಸುಮಾರು 8 ರಿಂದ 10 ಕೋಟಿ ರೂ. ಗಳಿಸಿರುವುದಾಗಿ ಬಾಕ್ಸ್ ಆಫೀಸ್ ಮೂಲಗಳು ತಿಳಿಸಿವೆ. ಮೊದಲ ದಿನದ ಒಟ್ಟು ವಸೂಲಿ 10 ಕೋಟಿ ರೂ. ತಲುಪಿದ್ದು, ಚಿತ್ರದ ಓಟ ಇನ್ನಷ್ಟು ವೇಗ ಪಡೆಯುವ ಸೂಚನೆ ನೀಡಿದೆ.

