Monday, October 20, 2025

ನನಗೆ ಬುದ್ದಿ ಕಲಿಸಬೇಕೆಂದು ಚಿತ್ತಾಪುರದಲ್ಲಿ ಪಥಸಂಚಲನದ ಪ್ಲ್ಯಾನ್ : ಸಚಿವ ಪ್ರಿಯಾಂಕ ಖರ್ಗೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥ ಸಂಚಲನಕ್ಕೆ ಅನುಮತಿ ನಿರಾಕರಣೆ ವಿಚಾರವಾಗಿ ಕೋರ್ಟ್ ನಲ್ಲಿ ಬಹಳಷ್ಟು ಚರ್ಚೆಯಾಗಿದೆ ಶಾಂತಿ ಕಾಪಾಡುವ ಜವಾಬ್ದಾರಿ ಸರ್ಕಾರದ್ದು ಎಂದು ಜಡ್ಜ್ ಹೇಳಿದ್ದಾರೆ. ಮತ್ತೊಮ್ಮೆ ಅರ್ಜಿ ಹಾಕಿದರೆ ಪರಿಗಣಿಸಿ ಎಂದು ಕೋರ್ಟ್ ಹೇಳಿದೆ. ಮತ್ತೊಮ್ಮೆ ಅರ್ಜಿ ಕೊಡಲಿ ಆಗ ಸರ್ಕಾರ ಯೋಚನೆ ಮಾಡುತ್ತದೆ. ಮತ್ತೊಮ್ಮೆ ಅರ್ಜಿ ಸಲ್ಲಿಸಿದರೆ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು.

ತಮ್ಮ ಕ್ಷೇತ್ರ ಚಿತ್ತಪುರದಲ್ಲಿ ತಾಲೂಕು ಆಡಳಿತ ಆರ್‌ಎಸ್‌ಎಸ್‌ ಪಥ ಸಂಚಲನಕ್ಕೆ ಅನುಮತಿ ನೀಡದ್ದಕ್ಕೆ ಸುದಿಗೋಷ್ಠಿ ನಡೆಸಿ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಆರ್‌ಎಸ್‌ಎಸ್ ಕಲಬುರಗಿ ಜಿಲ್ಲೆಯಲ್ಲಿ ಪಥಸಂಚಲನ ಮಾಡುತ್ತೇವೆ ಎಂದು ಹೇಳಿತ್ತು. ಸರ್ಕಾರಿ ಜಾಗಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ನಿಷೇಧಿಸುವಂತೆ ಪತ್ರ ಬರೆದಿದ್ದಕ್ಕೆ ಉದ್ದೇಶಪೂರ್ವಕವಾಗಿ ನನ್ನ ಮತ ಕ್ಷೇತ್ರದಲ್ಲಿ ಪ್ಲ್ಯಾನ್ ಮಾಡಿದ್ದಾರೆ. ಬೆದರಿಕೆ ಹಾಕಿದ ವ್ಯಕ್ತಿಯ ಬಂಧನ ಆದಮೇಲೆ ನನಗೆ ಬುದ್ದಿ ಕಲಿಸಬೇಕೆಂದು ಚಿತ್ತಾಪುರದಲ್ಲಿ ಪಥಸಂಚಲನದ ಪ್ಲ್ಯಾನ್ ಮಾಡಿದ್ದಾರೆ ಎಂದರು.

ಆರ್‌ಎಸ್‌ಎಸ್‌ಗೆ ತಕ್ಷಣವೇ ಪಥ ಸಂಚಲನ ಮಾಡಿ ಏನು ಸಾಧಿಸಬೇಕಿತ್ತು? ಅಮಾಯಕ ವ್ಯಕ್ತಿಯಿಂದ ಬೆದರಿಕೆ ಹಾಕಿಸ್ತೀರಿ. ನಿಮ್ಮ ಮಾತಿನಿಂದ ಜನರಿಗೆ ಘಾಸಿಯಾಗಿದೆ ಆಕ್ರೋಶವಿದೆ ಇದೇ ಸಂದರ್ಭದಲ್ಲಿ ಯಾಕೆ ಪಥಸಂಚಲನ ಮಾಡಬೇಕು ಎಂದು ಕೇಳಿದರು.

ಚಿತ್ತಾಪುರದ ಹಿಂದಿನ ಬಿಜೆಪಿ ಅಭ್ಯರ್ಥಿ ಪ್ರೆಸ್ ಮೀಟ್ ಮಾಡಿ ಆರ್‌ಎಸ್‌ಎಸ್‌ ಕಟ್ಟರ್ ಸಂಘಟನೆ. ಬೆದರಿಕೆ ಅಲ್ಲ ನಾಳೆ ನಿಮ್ಮ ಮನೆಗೂ ಬರುತ್ತಾರೆ. ಹುಷಾರು ಅಂತ ಮತ್ತೆ ಬೆದರಿಕೆ ಹಾಕ್ತಾನೆ. ಇದಾದ ಮೇಲೆ ಮತ್ತೆ ಪಥಸಂಚಲನ ಮಾಡಬೇಕಾ? ಚಿತ್ತಾಪುರದ ಜನಪ್ರತಿನಿಧಿಯನ್ನು ನಿಂದಿಸಿದ ನಿಮಗೆ ಇವತ್ತೇ ಅವಕಾಶ ಕೊಡಬೇಕೇ ಎಂದು ಪ್ರಶ್ನಿಸಿದರು.

ನಮ್ಮ ಪರವಾಗಿ ಜನರೂ ಇದ್ದಾರೆ, ನಾವೇನಾದರೂ ಪ್ರಚೋದನೆ ಕೊಟ್ಟಿದ್ದೀವಾ? ಎಂಎಲ್‌ಎ ಅಭ್ಯರ್ಥಿ ಬೈತಾರೆ, ಸಂಘಟನೆ ಬೈಯುತ್ತದೆ, ಅಲ್ಲಿಯೇ ಪಥ ಸಂಚಲನ ಮಾಡುತ್ತೀರಾ ಎಂದು ಪ್ರಿಯಾಂಕ್‌ ಖರ್ಗೆ ನಾನಾ ಪ್ರಶ್ನೆಗಳನ್ನು ಕೇಳಿದ್ದಾರೆ.

error: Content is protected !!