ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೊಲೀಸ್ ಜೀಪ್‌ಗೆ ಅಡ್ಡಲಾಗಿ ಬಂದ ಕತ್ತೆಕಿರುಬಕ್ಕೆ ಡಿಕ್ಕಿ ಹೊಡೆದು, ಜೀಪ್ ಕಂದಕಕ್ಕೆ ಉರುಳಿದ ಪರಿಣಾಮ ಮೂವರು ಪೊಲೀಸ್ ಅಧಿಕಾರಿಗಳಿಗೆ ಗಾಯಗೊಂಡಿದ್ದರು. ಇದೀಗ ಗಂಭೀರ ಗಾಯಗೊಂಡಿದ್ದ ಎಎಸ್‌ಐ ಮೃತಪಟ್ಟಿದ್ದಾರೆ.
ಬೆಟಗೇರಿ ಪೊಲೀಸ್ ಠಾಣೆಯ ಎಎಸ್‌ಐ ಕಾಶಿಮ್ ಸಾಬ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸೆ.23 ರಂದು ಬೆಳಗ್ಗಿನ ಜಾವ ಪೊಲೀಸ್ ಅಧಿಕಾರಿಗಳು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಾಮ್ರಾಟ್ ಗಣೇಶ ವಿಸರ್ಜನೆ ಬಂದೋಬಸ್ತ್ ಮುಗಿಸಿ ವಾಪಾಸಾಗುತ್ತಿದ್ದರು.
ಈ ವೇಳೆ ಸೊರಟೂರ ಗ್ರಾಮದ ಬಳಿ ವಾಹನಕ್ಕೆ ಅಡ್ಡ ಬಂದ ಕತ್ತೆಕಿರುಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪೊಲೀಸ್ ಜೀಪ್ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿತ್ತು. ಘಟನೆ ವೇಳೆ ಜೀಪ್‌ನಲ್ಲಿದ್ದ ಇನ್ಸೆಪೆಕ್ಟರ್ ಉಮೇಶ್‌ಗೌಡ ಪಾಟೀಲ್, ಬೆಟಗೇರಿ ಎಎಸ್‌ಐ ಕಾಶಿಮ್ ಸಾಬ್ ಹಾಗೂ ಚಾಲಕ ಓಂನಾಥ್ ಅವರಿಗೆ ಗಾಯಗಳಾಗಿದ್ದವು. ಗಾಯಾಳುಗಳನ್ನು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.