Saturday, September 20, 2025

ಬೆಸ್ಕಾಂ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ಇಂದಿನಿಂದ 12 ದಿನ ವಿದ್ಯುತ್ ವ್ಯತ್ಯಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಸ್ಕಾಂ ವ್ಯಾಪ್ತಿಯಲ್ಲಿ 12 ದಿನಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಘೋಷಿಸಿದೆ. ಆ ಮೂಲಕ ಇಂದಿನಿಂದ ಸೆಪ್ಟೆಂಬರ್ 30 ರವರೆಗೆ ಬೆಂಗಳೂರು ಸೇರಿ ಬೆಸ್ಕಾಂ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ 6 ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ತುರ್ತು ನಿರ್ವಹಣೆ ಸಂಬಂಧ ವಿದ್ಯುತ್​​ ಕಡಿತಗೊಳಿಸಲಾಗುತ್ತಿದ್ದು, ಸಾರ್ವಜನಿಕರು ಸಹಕರಿಸುವಂತೆ ತಿಳಿಸಲಾಗಿದೆ.

ವಿದ್ಯುತ್ ವ್ಯತ್ಯಯ ಬಗ್ಗೆ ಬೆಸ್ಕಾಂ ಟ್ವೀಟ್​ ಮಾಡಿದೆ. ಸರ್ಜಾಪುರ-ಅತ್ತಿಬೆಲೆ 66 ಕೆವಿ ಲೈನ್​​ನ ಸಿಂಗಲ್-ಸರ್ಕ್ಯೂಟ್​​ ಹೆಚ್​​​ಟಿಎಲ್​​ಎಸ್​ ಕಂಡಕ್-ಟರ್‌ನ ತಂತಿಯನ್ನು ಸುಗಮಗೊಳಿಸಲು ಸೆಪ್ಟೆಂಬರ್ 19, 20 ಮತ್ತು 21 ರಂದು ವಿದ್ಯುತ್​ ಕಡಿತಗೊಳಿಸಲಾಗುತ್ತಿದೆ.

66/11 ಕೆವಿ ಅತ್ತಿಬೆಲೆ ವ್ಯಾಪ್ತಿ: ಯಡವನ-ಹಳ್ಳಿ, ಇಚ್ಚಂಗೂರು, ವಡ್ಡರ-ಪಾಳ್ಯ, ಅತ್ತಿಬೆಲೆ ಕೈಗಾರಿಕಾ ಪ್ರದೇಶ, ಬಳಗಾರನಹಳ್ಳಿ, ಮಂಚನಹಳ್ಳಿ, ಅತ್ತಿಬೆಲೆ ಪಟ್ಟಣ, ಮಾಯಸಂದ್ರ,ದಾಸನಪುರ, ಬಲ್ಲೂರು, ಕಂಬಳಿಪುರ, ಚಿಕ್ಕನಹಳ್ಳಿ, ಇಂಡ್ಲಬೆಲೆ, ಹಾರೋಹಳ್ಳಿ.

66/11 ಕೆವಿ ಆನೇಕಲ್ ವ್ಯಾಪ್ತಿ: ಆನೇಕಲ್ ಟೌನ್, ಕಾವಲುಹೊಸಹಳ್ಳಿ, ಗೌರೇನಹಳ್ಳಿ, ಹಲ್ದೇನಹಳ್ಳಿ, ಹೊಂಪಲಗಟ್ಟಾ, ಚೌಡೇನಹಳ್ಳಿ, ಹೊನ್ನ ಕಳಸಾಪುರ, ಕರ್ಪೂರು, ಬ್ಯಾಗಡದೇನಹಳ್ಳಿ, ಕಾಡ ಅಗ್ರಹಾರ, ಚಿಕ್ಕಹಾಗಡೆ, ದೊಡ್ಡಹಾಗಡೆ.

66/11 ಕೆವಿ ಸಮಂದೂರು ವ್ಯಾಪ್ತಿ: ಸಮಂದೂರು, ರಾಚಮನಹಳ್ಳಿ, ಗುಡ್ಡನಹಳ್ಳಿ, ಅರವಂಟಿಗೆ ಪುರ, ಪಿ.ಗೊಲ್ಲಹಳ್ಳಿ, ತೆಲಗರಹಳ್ಳಿ, ವನಕನಹಳ್ಳಿ.

ಇನ್ನು ತುಮಕೂರು ಬೆಸ್ಕಾಂ ವ್ಯಾಪ್ತಿಯಲ್ಲಿ ಅಟಲ್​ ಭೂಜಲ್​​ ಯೋಜನೆಯಡಿ ಪ್ರತ್ಯೇಕ ಕೃಷಿ ಫೀಡರ್​​​ ನಿರ್ಮಾಣ ಕಾಮಗಾರಿ ಹಿನ್ನಲೆ ಸೆ. 20, 22, 24, 26, 28 ಮತ್ತು 30 ರಂದು ಹನುಮಂತಪುರ, ಜಗನ್ನಾಥಪುರ, ಅಣ್ಣೆತೋಟ, ಅಗ್ನಿಬನಿರಾಯ ನಗರ, ನಿರ್ವಾಣಿ ಲೇಔಟ್, ಅಂಬೇಡ್ಕರ್‌ ನಗರ. ಬಿ.ಎ. ಗುಡಿಪಾಳ್ಯ.

ಸೆ. 19, 21, 23, 25, 27 ಮತ್ತು 29ರಂದು ಬಿ.ಹೆಚ್‌.ಪಾಳ್ಯ, ದಿಬ್ಬೂರು, ಗುಬ್ಬಿ ಗೇಟ್, ಹೊಸಹಳ್ಳಿ,  ಹಾರೋನಹಳ್ಳಿ, ರಿಂಗ್ ರಸ್ತೆ, ಹೆಬ್ಬಾಕ, ಹೊನ್ನೇನಹಳ್ಳಿ, ಡಿ.ಎಂ.ಪಾಳ್ಯ, ಕಪ್ಪೂರು, ನರಸಾಪುರ, ಪಿಎನ್​ಆರ್​​ ಪಾಳ್ಯ, ಭಜಂತ್ರಿ ಪಾಳ್ಯ, ಕೆಜಿ ಪಾಳ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್​ ಕಡಿತವಾಗಲಿದೆ.

ಇದನ್ನೂ ಓದಿ