Sunday, October 12, 2025

ಕಾಂತಾರ ತಂಡವನ್ನು ಹಾಡಿ ಹೊಗಳಿದ ಪ್ರಕಾಶ್ ರಾಜ್! ಏನಂದ್ರು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಚಿತ್ರರಂಗದ ಸಾಧನೆಗೆ ಹೊಸ ಗೆರೆ ಎಳೆದ ‘ಕಾಂತಾರ’ ಚಿತ್ರದ ಯಶಸ್ಸಿಗೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ಗೆ ನಟ ಪ್ರಕಾಶ್ ರಾಜ್ ಅಭಿನಂದನೆ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್‌ನಲ್ಲಿ ಅವರು, ರಿಷಬ್ ಶೆಟ್ಟಿ ಮತ್ತು ತಂಡದವರು ಕನ್ನಡ ಸಿನೆಮಾ ಹಾಗೂ ಮಣ್ಣಿನ ಪ್ರತಿಭೆಗಳ ವೈಶಿಷ್ಟ್ಯವನ್ನು, ಹಿರಿಮೆಗೊಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇವರ ಅಭೂತಪೂರ್ವ ಯಶಸ್ಸಿಗೆ ಹಾರ್ದಿಕ ಅಭಿನಂದನೆಗಳು ಸಲ್ಲಿಸುತ್ತಾ, ಈ ಸಾಧನೆ ಕನ್ನಡ ಚಿತ್ರರಂಗದ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಪ್ರಸಿದ್ಧಿಪಡಿಸುತ್ತದೆ ಎಂದು ಹೇಳಿದ್ದಾರೆ.

ಈ ಮೆಚ್ಚುಗೆಯನ್ನು ಪಡೆದು ರಿಷಬ್ ಶೆಟ್ಟಿ ಹೃದಯಪೂರ್ವಕ ಧನ್ಯವಾದಗಳು ಪ್ರಕಟಿಸಿದ್ದು, ಪ್ರಕಾಶ್ ಅಣ್ಣನ ಸಕಾರಾತ್ಮಕ ಪ್ರತಿಕ್ರಿಯೆಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ‘ಕಾಂತಾರ’ ಚಿತ್ರದ ಯಶಸ್ಸು, ಕನ್ನಡ ಚಿತ್ರರಂಗದ ನೈಪುಣ್ಯ ಮತ್ತು ಸೃಜನಶೀಲತೆಯನ್ನು ಮತ್ತೊಮ್ಮೆ ಜನರ ಮುಂದೆ ತಂದುಕೊಟ್ಟಿದೆ ಎಂಬುದರಲ್ಲಿ ಎರಡು ಮಾತಿಲ್ಲ.

error: Content is protected !!