Tuesday, October 7, 2025

‘ಕಾಂತಾರ: ಚಾಪ್ಟರ್ 1’ ಸಿನಿಮಾ ವೀಕ್ಷಣೆಗೆ ಇಡೀ ಥಿಯೇಟರ್‌ ಬುಕ್‌ ಮಾಡಿದ ಪ್ರತಾಪ್‌ ಸಿಂಹ!

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ಕರ್ನಾಟಕ ಸೇರಿ ದೇಶಾದ್ಯಂತ ಪ್ರೇಕ್ಷಕರಿಂದ ಅಭೂತಪೂರ್ವ ರೆಸ್ಪಾನ್ಸ್‌ ದೊರೆಯುತ್ತಿದೆ. ಈ ನಡುವೆ ಸಿನಿಮಾ ವೀಕ್ಷಣೆಗೆ ಬಿಜೆಪಿ ಮಾಜಿ ಸಂಸದ ಪ್ರತಾಪ್‌ ಸಿಂಹ ಅವರು ಇಡೀ ಥಿಯೇಟರ್‌ ಬುಕ್‌ ಮಾಡಿದ್ದಾರೆ.

ಬಿಜೆಪಿ ಕಾರ್ಯಕರ್ತರ ಒಡಗೂಡಿ ಕಾಂತಾರ-1 ನೋಡಲು ಅ. 4ರಂದು 4 ಗಂಟೆಗೆ ಮೈಸೂರಿನ ಡಿಆರ್‌ಸಿ ಚಿತ್ರಮಂದಿರದಲ್ಲಿ ಫುಲ್ ಸ್ಕ್ರೀನ್ ಬುಕ್ ಮಾಡಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಾಪ್‌ ಸಿಂಹ ಮಾಹಿತಿ ಹಂಚಿಕೊಂಡಿದ್ದಾರೆ.

ಮೈಸೂರಿನ ಡಿಆರ್‌ಸಿ ಸಿನಿಮಾಸ್‌ನ ಸ್ಕ್ರೀನ್‌-2ರಲ್ಲಿ ಕಾಂತಾರ -1 ಚಿತ್ರ ವೀಕ್ಷಿಸಲು ಒಟ್ಟು 197 ಸೀಟ್‌ಗಳನ್ನು ಪ್ರತಾಪ್‌ ಸಿಂಹ ಅವರು ಬುಕ್‌ ಮಾಡಿದ್ದು, ಇದಕ್ಕೆ 68, 920 ರೂ. ವೆಚ್ಚವಾಗಿದೆ.

‘ಕಾಂತಾರ’ದ ಪ್ರೀಕ್ವೆಲ್‌ ʼಕಾಂತಾರ: ಚಾಪ್ಟರ್‌ 1’ 30 ದೇಶಗಳಲ್ಲಿ ತೆರೆಕಂಡಿದೆ. ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ರಿಲೀಸ್‌ ಆಗಿದ್ದು, ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ನಿರೀಕ್ಷೆಯಂತೆ ಬಹುತೇಕ ಎಲ್ಲ ಕಡೆ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ. ದಸರಾ, ಗಾಂಧಿ ಜಯಂತಿಯ ಸಾರ್ವಜನಿಕ ರಜೆಯ ಹಿನ್ನೆಲೆಯಲ್ಲಿ ಚಿತ್ರ ತೆರೆಕಂಡಿದೆ. ಮೂಲಗಳ ಪ್ರಕಾರ ಚಿತ್ರ ಮೊದಲ ದಿನ ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 50 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿದೆ. ಜತೆಗೆ ರಜನಿಕಾಂತ್‌ ನಟನೆಯ ʼಕೂಲಿʼ ತಮಿಳು ಚಿತ್ರದ ಗಳಿಕೆಯನ್ನು ಮೀರಿಸಿದೆ.

error: Content is protected !!