Saturday, November 8, 2025

SHOCKING | ಪ್ರಸಂಗಕರ್ತ, ಛಾಂದಸ, ಯಕ್ಷಗಾನ ಗುರು ಗಣೇಶ ಕೊಲೆಕಾಡಿ ವಿಧಿವಶ

ಹೊಸದಿಗಂತ ವರದಿ ಮಂಗಳೂರು:

ಯಕ್ಷಗಾನ ಗುರುಗಳು, ಛಾಂದಸ, ಪ್ರಸಂಗಕರ್ತ ಗಣೇಶ ಕೊಲೆಕಾಡಿ (55) ಅವರು ಅನಾರೋಗ್ಯದಿಂದ ಶುಕ್ರವಾರ ಮೂಲ್ಕಿ ಅತಿಕಾರಿಬೆಟ್ಟು ಕೊಲೆಕಾಡಿಯ ಸ್ವಗೃಹದಲ್ಲಿ ವಿಧಿವಶರಾದರು.

ಯಕ್ಷಗಾನ ಭಾಗವತರಾಗಿದ್ದ ಕೊಲೆಕಾಡಿ ಅವರು ಬಹುಮುಖ ಪ್ರತಿಭೆಯಾಗಿದ್ದು, ಯಕ್ಷಗಾನ ಛಂದಸ್ಸು ಕ್ಷೇತ್ರದ ಅಪೂರ್ವ ಪ್ರತಿಭೆಯಾಗಿದ್ದರು.

ಯಕ್ಷಗಾನ ಛಂದಸ್ಸು ಕ್ಷೇತ್ರದಲ್ಲಿ ಛಂದೋಬ್ರಹ್ಮ ಶಿಮಂತೂರು ನಾರಾಯಣ ಶೆಟ್ಟಿ ಅವರ ಸಮರ್ಥ ಉತ್ತರಾಧಿಕಾರಿ ಎಂದು ಗುರುತಿಸಿಕೊಂಡಿದ್ದರು.

ಛಂದೋಬದ್ದವಾಗಿ ಅನೇಕ ಯಕ್ಷಗಾನ ಪ್ರಸಂಗಗಳನ್ನು ರಚಿಸಿರುವ ಕೊಲೆಕಾಡಿ ಅವರು ಹಲವಾರು ಮಂದಿ ಪ್ರಸಿದ್ದ ಶಿಷ್ಯರನ್ನು ರೂಪಿಸಿದ್ದರು. ಛಂದೋವಾರಿದಿ ಚಂದ್ರ ಬಿರುದಾಂಕಿತ ಗಣೇಶ ಕೊಲೆಕಾಡಿ ಅವರು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪಾರ್ತಿಸುಬ್ಬ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ, ಸನ್ಮಾನಕ್ಕೆ ಭಾಜನರಾಗಿದ್ದರು.

ಅವಿವಾಹಿತರಾಗಿದ್ದ ಗಣೇಶ ಕೊಲೆಕಾಡಿ ಅವರು ತಾಯಿಯನ್ನು ಅಗಲಿದ್ದಾರೆ.

error: Content is protected !!