Thursday, October 23, 2025

‘ಕಮಲದ ಮೊಗದೊಳೆ…ಕಮಲದ ಕಣ್ಣೋಳೆ’ ಹಾಡಿಗೆ ಮನಸೋತ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನವರಾತ್ರಿಯ ಸಮಯದಲ್ಲಿ ಹೆಚ್ಚು ಕೆಲ ಸಿಗುವ ಹಾಡುಗಳಲ್ಲಿ ಒಂದಾದ 1984ರಲ್ಲಿ ಬಿಡುಗಡೆಗೊಂಡ ‘ಹೊಸ ಇತಿಹಾಸ’ ಚಿತ್ರಕ್ಕಾಗಿ ಖ್ಯಾತ ಗಾಯಕಿ ಎಸ್. ಜಾನಕಿ ಅವರು ಹಾಡಿರುವ ‘ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ..’ ಎಂಬ ಹಾಡನ್ನಂತೂ ಕೇಳದವರಿಲ್ಲ.

ಇದೀಗ ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಈ ಹಾಡನ್ನು ಕೇಳಿ ಮೆಚ್ಚಿಕೊಂಡಿದ್ದು, ತಮ್ಮ ಟ್ವಿಟರ್​ ಖಾತೆಯಲ್ಲಿ ಈ ಹಾಡಿನ ಕುರಿತು ಟ್ವೀಟ್​​ ಮಾಡಿದ್ದಾರೆ. ಸದ್ಯ ಈ ಪೋಸ್ಟ್​ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗುತ್ತಿದೆ.

ನರೇಂದ್ರ ಮೋದಿಯವರ ಅಧಿಕೃತ ಟ್ವಿಟರ್​​ ಖಾತೆ(@narendramodi)ಯಲ್ಲಿ ಕನ್ನಡದ ಈ ಪ್ರಸಿದ್ಧ ಭಕ್ತಿಗೀತೆಯ ವಿಡಿಯೋವನ್ನು ಹಾಕಿ ದೇಶದ ಜನತೆಗೆ ನವರಾತ್ರಿ ಶುಭಾಶಯ ಕೋರಲಾಗಿದೆ. ದೇವಿಯೂ ಎಲ್ಲಾ ಭಕ್ತರಿಗೆ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಆಕೆಯ ಪ್ರೀತಿಯ ವಾತ್ಸಲ್ಯವು ಪ್ರತಿಯೊಬ್ಬರ ಜೀವನದಲ್ಲೂ ಹೊಸ ಶಕ್ತಿ ಮತ್ತು ಉತ್ಸಾಹವನ್ನು ತುಂಬಲಿ ಎಂದು ಟ್ವೀಟ್ ಮಾಡಲಾಗಿದೆ.

https://www.youtube.com/watch?v=bVYmbY3p_7c

error: Content is protected !!