ವೇಶ್ಯಾವಾಟಿಕೆ ಪ್ರಕರಣ: ಮಲಯಾಳಂ ನಟಿ ಮೀನು ಮುನೀರ್ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೀ ಟೂ ಆರೋಪ ಮಾಡಿ ಸುದ್ದಿಯಾಗಿದ್ದ ನಟಿ ಮೀನು ಮುನೀರ್ ಈಗ ‘ಮಾಂಸ ದಂಧೆ’ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ.

ಯುವತಿಯೊಬ್ಬಾಕೆಯನ್ನು ವೇಶ್ಯಾವಾಟಿಕೆಗೆ ಬಲವಂತವಾಗಿ ತಳ್ಳಿದ ಆರೋಪ ಸೇರಿದಂತೆ ಇನ್ನೂ ಕೆಲವು ಆರೋಪಗಳು ನಟಿಯ ಮೇಲಿದೆ. ತಮಿಳುನಾಡು ಪೊಲೀಸರು ನಟಿ ಮೀನು ಮುನೀರ್ ಅನ್ನು ಕೇರಳದ ಅಲುವಾನಲ್ಲಿ ಬಂಧಿಸಿ ಚೆನ್ನೈಗೆ ಕರೆದುಕೊಂಡು ಬಂದಿದ್ದಾರೆ.

ತಮಿಳು ಮತ್ತು ಮಲಯಾಳಂನ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಮೀನು ಮುನೀರ್ ತಮ್ಮದೇ ಸಂಬಂಧದ ಯುವತಿಯೊಬ್ಬಾಕೆಯನ್ನು ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿದ್ದ ಆರೋಪ ಎದುರಿಸುತ್ತಿದ್ದಾರೆ.

2014 ರಲ್ಲಿ ಈ ಘಟನೆ ನಡೆದಿದ್ದು ಈಗ ಪ್ರಕರಣ ದಾಖಲಾಗಿದೆ. ಮೀನು ಮುನೀರ್, ತನ್ನ ಹತ್ತಿರದ ಸಂಬಂಧದ ಯುವತಿಯೊಬ್ಬಾಕೆಗೆ ಸಿನಿಮಾನಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದರಂತೆ. ತಮಿಳುನಾಡಿನ ಚೆನ್ನೈನ ತಿರುಮಂಗಲಂ ಪೊಲೀಸರ ಬಳಿ ಈ ಬಗ್ಗೆ ದೂರು ದಾಖಲಾಗಿತ್ತು. ಪೋಕ್ಸೊ ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಿಕೊಂಡಿರುವ ಪೊಲೀಸರು ಅದರನ್ವಯ ನಟಿಯನ್ನು ಬಂಧಿಸಿದ್ದಾರೆ.

ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ವರದಿ ನೀಡಲು ಹೇಮಾ ಸಮಿತಿ ರಚಿಸಿದಾಗ ನಟಿ ಮೀನು ಮುನೀರ್ ಹಲವಾರು ಮಂದಿಯ ವಿರುದ್ಧ ಆರೋಪಗಳನ್ನು ಮಾಡಿದ್ದರು. ಬಾಲಚಂದ್ರ ಮೆನನ್, ಮುಖೇಶ್, ಮಣಿಯನ್‌ಪಿಳ್ಳ ರಾಜು, ಜಯಸೂರ್ಯ, ಎಡವಲೆ ಬಾಬು, ನಿರ್ಮಾಣ ನಿಯಂತ್ರಕ ನೋಬಲ್ ಮತ್ತು ವಿಚು ಅವರುಗಳ ಮೇಲೆ ಸಹ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಮೀನು ಮುನೀರ್ ಮಾಡಿದ್ದರು. ಆದರೆ ಈಗ ನಟಿಯೇ ವೇಶ್ಯಾವಾಟಿಕೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!