Friday, November 7, 2025

ಕಮಲ್ ಹಾಸನ್ ವಿರುದ್ಧ ಪ್ರತಿಭಟನೆ: ಸಿಲಿಕಾನ್‌ ಸಿಟಿಲಿ ಪ್ರದರ್ಶನ ಇಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಮಿಳು ನಟ ಕಮಲ್ ಹಾಸನ್ ಈ ಹಿಂದೆ ಕನ್ನಡ ಭಾಷೆಯ ಬಗ್ಗೆ ನೀಡಿದ್ದ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡಿತ್ತು. ಥಗ್ ಲೈಫ್ ಸಿನಿಮಾ ಬಿಡುಗಡೆ ವೇಳೆ ಕಮಲ್ ಹಾಸನ್ ಕನ್ನಡದ ಬಗ್ಗೆ ಮಾತನಾಡಿ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದರು.

`ಕನ್ನಡ ತಮಿಳು ಭಾಷೆಯಿಂದಲೇ ಹುಟ್ಟಿದೆ’ ಎಂಬ ಮಾತುಗಳು ತೀರ್ವ ವಿರೋಧವನ್ನೇ ಎಬ್ಬಿಸಿದ್ದವು. ಈ ಕಾರಣಕ್ಕೆ ಕಮಲ್ ಹಾಸನ್ ನಟನೆಯ `ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ `ಥಗ್ ಲೈಫ್’ ಸಿನಿಮಾ ಫ್ಲಾಪ್ ಆಯ್ತು.

ಇದೀಗ ಕಮಲ್ ಹಾಸನ್ ನಟನೆಯ ಹಳೆಯ ಸಿನಿಮಾ ಒಂದು ರಿ-ರಿಲೀಸ್ ಆಗುತ್ತಿದ್ದು, ಆ ಸಿನಿಮಾಕ್ಕೂ ಕನ್ನಡಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಕಮಲ್ ಹಾಸನ್ ನಟನೆಯ ನಾಯಗನ್ ಸಿನಿಮಾ ಇಂದು (ನ.7) ಭಾರತದ ಹಲವು ರಾಜ್ಯಗಳ ಪ್ರಮುಖ ನಗರಗಳಲ್ಲಿ ಮರು ಬಿಡುಗಡೆ ಆಗುತ್ತಿದೆ. ಆದರೆ ಕರ್ನಾಟಕದಲ್ಲಿ ಸಿನಿಮಾದ ಮರು ಬಿಡುಗಡೆಗೆ ವಿರೋಧ ವ್ಯಕ್ತವಾಗಿದೆ.

ನ.7 ರಂದು ಕಮಲ್ ಹಾಸನ್ ಹುಟ್ಟುಹಬ್ಬವಿದ್ದು, ಇದೇ ದಿನ `ನಾಯಗನ್’ ಸಿನಿಮಾ ಚೆನ್ನೈ, ಹೈದರಾಬಾದ್ ಸೇರಿದಂತೆ ಇನ್ನೂ ಹಲವು ನಗರಗಳಲ್ಲಿ ಮರು ಬಿಡುಗಡೆ ಆಗಿದೆ. ಆದರೆ ಕರ್ನಾಟಕದಲ್ಲಿ ಬಿಡುಗಡೆ ಆಗಬಾರದೆಂದು ಸಾರಾ ಗೋವಿಂದು ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.

error: Content is protected !!