ಸೀಬರ್ಡ್ ನೌಕಾನೆಲೆ ಯೋಜನೆಯಲ್ಲಿ ನಿರಾಶ್ರಿತ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿ: ಸ್ಥಳೀಯರ ಒತ್ತಾಯ

ಹೊಸದಿಗಂತ ವರದಿ ಅಂಕೋಲಾ: ಸೀಬರ್ಡ್ ನೌಕಾನೆಲೆ ಯೋಜನೆಯಲ್ಲಿ ಸ್ಥಳೀಯ ನಿರಾಶ್ರಿತ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವಂತೆಒತ್ತಾಯಿಸಿ ಸ್ಥಳೀಯ ನಿರಾಶ್ರಿತರು, ಅಸಂಘಟಿತ ಕಾರ್ಮಿಕರು ನೌಕಾನೆಲೆಯ ವಜ್ರಕೋಶ ದ್ವಾರದ ಬಳಿ ಪ್ರತಿಭಟನೆ ನಡೆಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆಗೆ ತೆರಳುತ್ತಿದ್ದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದರು. ಕಳೆದ 16 ವರ್ಷಗಳಿಂದ ನೌಕಾನೆಲೆ ಯೋಜನೆಯಲ್ಲಿ ಉದ್ಯೋಗಕ್ಕಾಗಿ ಆಗ್ರಹಿಸುತ್ತ ಬರಲಾದರೂ ಉದ್ಯೋಗಾವಕಾಶಕ್ಕೆ ನಿರಾಶ್ರಿತರನ್ನು ಪರಿಗಣಿಸಲಾಗುತ್ತಿಲ್ಲ ಎಂದು ಉದ್ಯೋಗಕ್ಕಾಗಿ ಸಲ್ಲಿಸಿದ ಮನವಿಗಳ ಕಡತ ಪ್ರದರ್ಶಿಸಿ ಆಕ್ರೋಶ … Continue reading ಸೀಬರ್ಡ್ ನೌಕಾನೆಲೆ ಯೋಜನೆಯಲ್ಲಿ ನಿರಾಶ್ರಿತ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿ: ಸ್ಥಳೀಯರ ಒತ್ತಾಯ