ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ಕೆಟ್ಟ ಕಾಮೆಂಟ್ ಮಾಡುವವರ ವಿರುದ್ಧ ನಟ ವಸಿಷ್ಠ ಸಿಂಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮಾಜದಲ್ಲಿ ಇತ್ತೀಚೆಗೆ “ಕಾಮೆಂಟ್ ಕಲಿವೀರರು” ಹೆಚ್ಚಾಗುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸೋಷಿಯಲ್ ಮೀಡಿಯಾ ಬಳಸುವಲ್ಲಿ ಹೊಣೆಗಾರಿಕೆ ಅಗತ್ಯವಿದೆ ಎಂದು ಒತ್ತಿ ಹೇಳಿದರು. ಇತರರ ಖಾತೆಗಳಿಗೆ ಹೋಗಿ ಅವಹೇಳನಕಾರಿ ಮಾತು ಬರೆಯುವುದು, ಕೆಣಕುವುದು ಅಥವಾ ಶೌರ್ಯ ಪ್ರದರ್ಶಿಸುವುದು ಯಾವುದೇ ರೀತಿಯ ಸಾಧನೆ ಅಲ್ಲ, ಅದು ಮಾನಸಿಕ ವಿಕೃತಿಯ ಲಕ್ಷಣ ಎಂದು ಕಿಡಿಕಾರಿದರು. ಸಾಧ್ಯವಾದಷ್ಟು ಒಳ್ಳೆಯ ವಿಚಾರಗಳನ್ನು ಮಾತ್ರ ಹಂಚಿಕೊಳ್ಳಬೇಕು, ಕೆಟ್ಟತನವನ್ನು ಉತ್ತೇಜಿಸುವ ಕೆಲಸ ಯಾರೂ ಮಾಡಬಾರದು ಎಂದು ಅಭಿಮಾನಿಗಳಿಗೆ ಕರೆ ನೀಡಿದರು.

