Monday, October 6, 2025

ಮದುವೆ ಕುರಿತು ಬಿಗ್ ಅಪ್​ಡೇಟ್ ಕೊಟ್ಟ ರಚಿತಾ ರಾಮ್, ಏನು ಹೇಳಿದ್ರು ನೋಡಿ ಡಿಂಪಲ್ ಕ್ವೀನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ರಚಿತಾ ರಾಮ್ ವಿವಾಹದ ಬಗ್ಗೆ ಮಾಹಿತಿ ನೀಡಿದ್ದಾರೆ. ಬರ್ತ್​ಡೇ ಸಮಯದಲ್ಲೇ ಮಾಹಿತಿ ರಿವೀಲ್ ಮಾಡಿದ್ದಾರೆ.

ಮದುವೆಯಾಗುವ ಹುಡುಗ ಹೇಗಿರಬೇಕು ಎನ್ನುವ ಬಗ್ಗೆ ಯಾವ ಡ್ರೀಮ್ ಇಲ್ಲ. ಮನೆಯಲ್ಲಿ ಹುಡುಗನನ್ನ ಹುಡುಕುವ ಕಾರ್ಯಗಳು ನಡೆಯುತ್ತಿವೆ ಎನ್ನುವ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ರಚಿತಾ ರಾಮ್​ಗೆ ಈಗ 33 ವರ್ಷ. ಬರ್ತ್​ಡೇದಿನ ಮದುವೆ ಬಗ್ಗೆ ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರಿಸಿದ ಅವರು, ‘ವಿವಾಹ ಆಗಬೇಕು ಅಂತ ನಿರ್ಧರಿಸಿದ್ದೇನೆ. ಆದಷ್ಟು ಬೇಗ ಮದುವೆ ಆಗುತ್ತೇನೆ. ಮನೆಯಲ್ಲಿ ಹುಡುಗನ ಹುಡುಕುತ್ತಾ ಇದ್ದಾರೆ. ನಾನು ಅರೇಂಜ್ ಮ್ಯಾರೇಜ್ ಆಗ್ತೀನಿ’ ಎಂದು ಹೇಳಿದ್ದಾರೆ.

ರಚಿತಾ ರಾಮ್ ಅವರಿಗೆ ಈಗ ಪರಭಾಷೆಯಿಂದ ಬೇಡಿಕೆ ಸೃಷ್ಟಿ ಆಗುತ್ತಿದೆ. ತಮಿಳಿನಿ ರಜಿನಕಾಂತ್ ನಟನೆಯ ‘ಕೂಲಿ’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದರು. ಈಗ ಲೋಕೇಶ್ ಕನಗರಾಜ್ ಹೀರೋ ಆಗಿ ನಟಿಸುತ್ತಿರುವ ತಮಿಳು ಸಿನಿಮಾಗೆ ಇವರು ನಾಯುಕಿ ಎಂಬ ಮಾತುಗಳು ಕೂಡ ಕೇಳಿ ಬಂದಿವೆ.